Saturday, June 30, 2012

ಯಕ್ಷಕಲಾ ನಿಧಿ ಪ್ರಶಸ್ತಿಗೆ ಸಂಪಾಜೆ ಶೀನಪ್ಪ ರೈ ಆಯ್ಕೆ


  • ಯಕ್ಷಕಲಾ ನಿಧಿ ಪ್ರಶಸ್ತಿಗೆ ಸಂಪಾಜೆ ಶೀನಪ್ಪ ರೈ ಆಯ್ಕೆಮಂಗಳೂರು : ಹೊಸದಿಲ್ಲಿಯ ಅಕಾಡೆಮಿ ಆಫ್ ತೆಂಕುತಿಟ್ಟು ಯಕ್ಷಗಾನ ಕೊಡಮಾಡುವ ’ಯಕ್ಷಕಲಾ ನಿಧಿ’ ಪ್ರಶಸ್ತಿಗೆ ಈ ಬಾರಿ ತೆಂಕುತಿಟ್ಟಿನ ಪ್ರಸಿದ್ಧ ಹಿರಿಯ ಯಕ್ಷಗಾನ ಕಲಾವಿದ ಸಂಪಾಜೆ ಶೀನಪ್ಪ ರೈ ಪಾತ್ರರಾಗಿದ್ದಾರೆ.ಸುಮಾರು ೫೬ ವರ್ಷಗಳಿಂದ ಯಕ್ಷಗಾನ ರಂಗದಲ್ಲಿ ಸತತವಾಗಿ ದುಡಿಯುತ್ತಿರುವ ಸಂಪಾಜೆ ಶೀನಪ್ಪ ರೈ, ಪುಂಡುವೇಷ, ರಾಜವೇಷಗಳ ಮೂಲಕ ವಿಶಿಷ್ಟ ಛಾಪು ಮೂಡಿಸಿದ್ದಾರೆ. ನಿಖರವಾದ ಪಾತ್ರ ಕಲ್ಪನೆ ಮತ್ತು ಅಚ್ಚುಕಟ್ಟಾದ ಪ್ರಸ್ತುತೀಕರಣದ ಮೂಲಕ ಪ್ರಾಜ್ಞರಿಂದಲೂ ಅವರು ಸೈ ಎನ್ನಿಸಿಕೊಂಡ ಖ್ಯಾತ ಕಲಾವಿದ ಎಂದವರು ಹೇಳಿದರು.ಜು. ೮ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಸಂಸ್ಥೆಯ ನಿರ್ದೇಶಕಿ ವಿದ್ಯಾ ಕೋಳ್ಯೂರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.ಪುಂಡುವೇಷ, ರಾಜವೇಷಗಳ ಮೂಲಕ ತಮ್ಮದೇ ಆದ ಶೈಲಿಯಲ್ಲಿ ವಿಶಿಷ್ಟ ಛಾಪು ಮೂಡಿಸಿರುವ, ನಿಖರ ಪಾತ್ರ ಕಲ್ಪನೆ ಮತ್ತು ಅಚ್ಚುಕಟ್ಟಾದ ಪ್ರಸ್ತುತೀಕರಣದ ಮೂಲಕ ಪ್ರಾಜ್ಞರಿಂದಲೂ ಸೈ ಎನಿಸಿಕೊಂಡಿರುವ ಶೀನಪ್ಪ ರೈ ಪರಂಪರೆಯನ್ನು ಬಿಟ್ಟು ಹೋದವರಲ್ಲ ಎಂದು ವಿದ್ಯಾ ಹೇಳಿದರು.೨೦೦೬ರಲ್ಲಿ ಆರಂಭಗೊಂಡ ಅಕಾಡೆಮಿ ಆಫ್ ತೆಂಕುತಿಟ್ಟು ಯಕ್ಷಗಾನ, ಈ ತನಕ ೮ ಮಂದಿ ಹಿರಿಯ ಕಲಾವಿದರನ್ನು ಸಮ್ಮಾನಿಸಿ ಗೌರವಿಸಿದೆ. ಕಟೀಲು ಪುರುಷೋತ್ತಮ ಭಟ್, ಪೆರುವೋಡಿ ನಾರಾಯಣ ಭಟ್, ಮಿಜಾರು ಅಣ್ಣಪ್ಪ, ಮಲ್ಪೆ ರಾಮದಾಸ ಸಾಮಗ, ಕೋಳ್ಯೂರು ರಾಮಚಂದ್ರ ರಾವ್, ಕುಂಬ್ಳೆ ಸುಂದರ ರಾವ್, ಸೂರಿಕುಮೇರಿ ಗೋವಿಂದ ಭಟ್ ಮತ್ತು ಬಲಿಪ ನಾರಾಯಣ ಭಾಗವತ ಅವರನ್ನು ಈಗಾಗಲೇ ಸಮ್ಮಾನಿಸಿ ಗೌರವಿಸಲಾಗಿದೆ ಎಂದರು.ಜು. ೮ ರಂದು ಪುರಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ೧೫,೦೦೦ ನಗದು, ನೆನಪಿನ ಕಾಣಿಕೆ ಸೇರಿದಂತೆ ಪ್ರಶಸ್ತಿ ಪ್ರದಾನ ನಡೆಯಲಿದೆ. ಕರ್ನಾಟಕ ಸರಕಾರದ ದಿಲ್ಲಿ ಪ್ರತಿನಿಧಿ ವಿ. ಧನಂಜಯ ಕುಮಾರ್, ಮಂಗಳೂರು ವಿ.ವಿ.ಯ ಕುಲಸಚಿವ ಡಾ| ಚಿನ್ನಪ್ಪ ಗೌಡ, ಸೂರಿಕುಮೇರು ಗೋವಿಂದ ಭಟ್ ಮುಂತಾದವರು ಭಾಗವಹಿಸಲಿದ್ದಾರೆ ಎಂದವರು ಹೇಳಿದರು.ಸಂಪಾಜೆ ಶೀನಪ್ಪ ರೈ ಅವರ ವೈಯಕ್ತಿಕ ಹಾಗೂ ರಂಗ ಜೀವನದ ಕುರಿತ ಸಾಕ್ಷ್ಯ ಚಿತ್ರದ ಪ್ರದರ್ಶನವಿದೆ. ನಂತರ ಕುಳಾಯಿಯ ಯಕ್ಷಮಂಜೂಷ ಮಂಗಳೂರು ತಂಡದಿಂದ ’ಶ್ರೀ ಕೃಷ್ಣ -ಜನ್ಮ ಲೀಲೆ ಮತ್ತು ಕಂಸವಧೆ’ ಯಕ್ಷಗಾನ ಪ್ರದರ್ಶನವಿದೆ.ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿ ಆಫ್ ತೆಂಕುತಿಟ್ಟು ಯಕ್ಷಗಾನ ಸಂಸ್ಥೆಯ ನಿರ್ದೇಶಕ ಸರವು ಕೃಷ್ಣ ಭಟ್ ಉಪಸ್ಥಿತರಿದ್ದರು.



1 comment:

  1. Good choice, Congratulations to Sampaje, He is symbol of Traditional Tenku Tittu Yakshagan

    ReplyDelete