Thursday, August 30, 2012

’ಮಾತು ಮಂತ್ರವಾಗುವವರೆಗೆ’ ’ಮರೆತು ಹೋದ ದೊಂಬರಾಕೆ’

ನಾಟಕೀಯತೆಯೇ ಶಿವಪ್ರಕಾಶ್ ಕವಿತೆಗಳ ಜೀವಾಳ: ರೆಹಮತ್ ತರೀಕೆರೆ
ಶಿವಮೊಗ್ಗ: ಕವಿ ಎಚ್.ಎಸ್.ಶಿವಪ್ರಕಾಶ್‌ರ ಕವಿತೆಗಳು ನಾಟಕೀಯತೆಯಿಂದ ಕೂಡಿವೆ. ನಾಟಕೀಯತೆಯೇ ಅವರ ಕವಿತೆಗಳ ಜೀವಾಳ. ನಾಟಕೀಯ ತಿರುವುಗಳು ಕವಿತೆಗಳ ವಿಶೇಷ ಎಂದು ವಿಮರ್ಶಕ ರೆಹಮತ್ ತರೀಕೆರೆ ಅಭಿಪ್ರಾಯಪಟ್ಟರು.
ನಗರದ ಕಮಲಾನೆಹರು ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಬುಧವಾರ ಸಂಜೆ ಅಹರ್ನಿಶಿ ಪ್ರಕಾಶನದಿಂದ ಏರ್ಪಡಿಸಿದ್ದ ಎಚ್.ಎಸ್.ಶಿವಪ್ರಕಾಶ್ ಅವರ ’ಮಾತು ಮಂತ್ರವಾಗುವವರೆಗೆ’ ಮತ್ತು ’ಮರೆತು ಹೋದ ದೊಂಬರಾಕೆ’ ಕವನ ಸಂಕಲನಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
ಶಿವಪ್ರಕಾಶ್ ಅವರ ಕಾವ್ಯದಲ್ಲಿ ಒಂದು ರೀತಿಯ ತಲ್ಲಣ, ವಿಹ್ವಲ, ಚಡಪಡಿಕೆ, ವಿಷಾದವಿದೆ. ಇದು ವೈಯಕ್ತಿಕವೋ, ಸಾಮಾಜಿಕವೋ, ರಾಜಕೀಯ ತಲ್ಲಣವೋ ಅರಿವಾಗುವುದಿಲ್ಲ. ಕವಿತೆಗಳ ನಾಯಕರು ಕೂಡ ಈ ತಲ್ಲಣ, ವಿಹ್ವಲತೆ ಅನುಭವಿಸುತ್ತಾರೆ. ಮಾತು ಮಂತ್ರವಾಗುವವರೆಗೆ ಹೆಚ್ಚು ಪ್ರಾರ್ಥನೆಗಳನ್ನು, ಕ್ರಿಯಾ ರೂಪಗಳನ್ನು ಒಳಗೊಂಡಿರುವ ಕವನ ಸಂಕಲನ. ಕುವೆಂಪು, ಬೇಂದ್ರೆ ಕಾವ್ಯದಲ್ಲಿ ಬಿಟ್ಟರೆ ಶಿವಪ್ರಕಾಶ್ ಕಾವ್ಯದಲ್ಲಿ ಇಂತಹ ಕ್ರಿಯಾರೂಪ ಕಾಣಬಹುದು. ಹಾಗೆಯೇ ಅಡಿಗರನ್ನು ಬಿಟ್ಟರೆ ಇಷ್ಟೊಂದು ಪ್ರಾರ್ಥನೆ, ಆವಾಹನೆ ಇರುವುದು ಇವರ ಕವಿತೆಗಳಲ್ಲಿ. ಒಂದು ರೀತಿಯ ಆರ್ತದನಿಯೂ ಇದೆ ಎಂದು ವಿಶ್ಲೇಷಿಸಿದರು.
ಎಚ್.ಎಸ್.ಅನುಪಮಾ, ರೆಹಮತ್ ತರೀಕೆರೆ, ಡಾ.ರಾಜೇಂದ್ರ ಚೆನ್ನಿ,
ಪ್ರೊ.ಎಚ್.ಎಸ್.ಶಿವಪ್ರಕಾಶ್ , ಜಿಂಗೋನಿಯಾ ಜಿಂಗೋನೆ
 

ತನ್ನನ್ನು ತಾನರಿಯುವ ಹಂತದಲ್ಲಿರುವ ಈ ಕವಿತೆಗಳು ಕುದಿತದಲ್ಲಿ ತಿಳಿಯುವಂತಹವು. ಈ ಮಟ್ಟದಲ್ಲಿ ಅವೈದಿಕ, ಅನುಭಾವಿಕ ಕವಿಗಳಿಂದ ಪ್ರೇರಣೆ ಪಡೆದ ಕವಿ ಮತ್ತೊಬ್ಬರಿಲ್ಲ. ಕುವೆಂಪು ಸಾಹಿತ್ಯದಲ್ಲಿ ಶಿವ ಸಂಸ್ಕೃತಿ ಇದೆ. ಹಾಗೆಯೇ ಶಿವಪ್ರಕಾಶ್ ಕಾವ್ಯದಲ್ಲೂ ಶಿವ ಸಂಸ್ಕೃತಿ ಕಾಣಬಹುದು. ಆದರೆ, ಇವು ಹೆಚ್ಚು ಅವೈದಿಕ ಸಂಸ್ಕೃತಿಯವು. ಬೇರೆ ಬೇರೆ ದಾರ್ಶನಿಕ, ಕಾವ್ಯ ಪರಂಪರೆಯಿಂದ ಅನುಸಂಧಾನ ಮಾಡಿ ಶೋಧಿಸುವ ಕಾರ್ಯವನ್ನು ಬೇರೊಬ್ಬರು ಮಾಡಿಲ್ಲ. ಆಧುನಿಕ ವಿಕಾರಗಳಿಗೆ ಇವು ಮದ್ದು ಎಂಬ ಭಾವ ಕೂಡ ಕವಿಗೆ ಇಲ್ಲ ಎಂದರು.
ಕವಿತೆಗಳು ಎಳನೀರಿನಂತೆ ಪಾರದರ್ಶಕವಾಗಿದ್ದರೂ ಅನೇಕ ವರ್ಷಗಳ ಅನುಭವದಿಂದ ಪಾಕಗೊಂಡ ಕವನ ಸಂಕಲನವಿದು. ಚಿಂತನಶೀಲತೆ, ಅಹಂಭಾವಿಕವಾದ ಸಂವೇದನಾಶೀಲತೆ ಇದೆ. ಶ್ರಮ ಸಂಸ್ಕೃತಿಯ ಅರಿವು ಇರುವವರು ಮಾತ್ರ ಇಂತಹ ಆಳವಾದ, ಸಾಮುದಾಯಿಕ ಪ್ರಜ್ಞೆಯಿಂದ ಕವಿತೆ ಬರೆಯಲು ಸಾಧ್ಯ ಎಂದು ಹೇಳಿದರು.
ಸಾಹಿತಿಗಳು ಭಾಷೆ ಬಗ್ಗೆ ತಾಳುತ್ತಿರುವ ಮಡಿವಂತಿಕೆಯಿಂದ ಭಾಷೆ ಕುಬ್ಜವಾಗುವ ಅಪಾಯವಿದೆ. ಅಪೂರ್ವವಾದ ಅನೇಕ ಪದಗಳು ನಶಿಸಬಹುದು. ಆದರೆ, ಶಿವಪ್ರಕಾಶ್ ಅಂತಹ ಮಡಿವಂತಿಕೆ ತೋರಿಲ್ಲ. ನಶಿಸುವ ಹಂತದಲ್ಲಿರುವ ಪದ, ಹಳಗನ್ನಡ ಪದ, ಜಾನಪದ, ಪಾರ್ಸಿ, ಉರ್ದು ಪದಗಳನ್ನೂ ಕಾವ್ಯದಲ್ಲಿ ದುಡಿಸಿಕೊಂಡಿದ್ದಾರೆ. ಇತ್ತೀಚೆಗೆ ಆಳವಾದ, ಗರ್ಭಾವಸ್ಥೆಯಿಂದ ಹುಟ್ಟುವ ಕಾವ್ಯಗಳು ಕಡಿಮೆಯಾಗುತ್ತಿವೆ. ಒಂದು ರೀತಿಯ ಏಕತಾನತೆ ಹುಟ್ಟುತ್ತಿರುವ ಸಂದರ್ಭದಲ್ಲಿ ಎಚ್.ಎಸ್.ಶಿವಪ್ರಕಾಶರ ಕವಿತೆಗಳು ಹಿರಿ-ಕಿರಿಯ ಲೇಖಕರಿಗೆ ಸವಾಲಿನ ರೀತಿಯಲ್ಲಿವೆ ಎಂದು ಬಣ್ಣಿಸಿದರು.
ಸಾಹಿತಿ ಪ್ರೊ.ಎಚ್.ಎಸ್.ಶಿವಪ್ರಕಾಶ್ ಮಾತನಾಡಿ, ಕಾವ್ಯಗಳನ್ನು ಅನುವಾದಿಸುವ ಮೂಲಕ ಸಾಕಷ್ಟು ಕಲಿತಿದ್ದೇನೆ. ದ್ವೈತ, ಅದ್ವೈತ ಯಾವುದೂ ಅಂತಿಮವಲ್ಲ. ಜಗತ್ತಿಗೆ ಅಂತಿಮ ರೂಪ ಇಲ್ಲ. ಅದು ಪರಿವರ್ತನಾಶೀಲವಾದುದು. ಸಿದ್ಧ ಚೌಕಟ್ಟಿಗೆ ಜಗತ್ತನ್ನು ಒಳಪಡಿಸುವುದು ಸರಿಯಲ್ಲ ಎಂದರು.
ತಲ್ಲಣ, ವಿಷಾದದ ಜಿಜ್ಞಾಸೆ!
ಎಚ್.ಎಸ್.ಶಿವಪ್ರಕಾಶ್ ಅವರ ’ಮಾತು ಮಂತ್ರವಾಗುವವರೆಗೆ’ ಕವನ ಸಂಕಲನ ವಿಮರ್ಶೆ ಮಾಡಿದ ವಿಮರ್ಶಕ ರೆಹಮತ್ ತರೀಕೆರೆ, ಶಿವಪ್ರಕಾಶರ ಇಡೀ ಕಾವ್ಯಗಳಲ್ಲಿ ಒಂದು ರೀತಿಯ ತಲ್ಲಣ, ವಿಹ್ವಲ, ವಿಷಾದ, ತಳಮಳ, ಚಡಪಡಿಕೆ ಇದೆ. ತುಂಬಾ ಆರ್ತತೆಯಲ್ಲಿ ಹುಟ್ಟಿದ ಕವಿತೆಗಳೆನಿಸುತ್ತವೆ. ಕವಿತೆಗಳನ್ನು ಓದಿದ ನಂತರವೂ ತಲ್ಲಣ, ವಿಷಾದ ಉಳಿದುಕೊಳ್ಳುತ್ತದೆ. ಅನೇಕ ಸಲ ನಾನು ಗೊಂದಲಕ್ಕೆ ಒಳಗಾಗಿದ್ದೇನೆ. ಅವರ ಒಟ್ಟೂ ಕಾವ್ಯ ಓದಿಕೊಂಡಿದ್ದರೂ ಇನ್ನೂ ಪೂರ್ತಿ ಅರ್ಥ ಆಗಿಲ್ಲ. ಬಹುತೇಕ ಕವಿತೆಗಳು ಉರಿವ ಆತ್ಮದಂತಿವೆ ಎಂದು ವಿಶ್ಲೇಷಿಸಿದರು.
ಲೇಖಕಿ ಎಚ್.ಎಸ್.ಅನುಪಮಾ ಕೂಡ ರೆಹಮತ್ ತರೀಕೆರೆ ಅವರ ಅನಿಸಿಕೆಗೆ ಸಾಥ್ ನೀಡಿ, ಶಿವಪ್ರಕಾಶ್ ಅವರ ಕಾವ್ಯದ ಬಗ್ಗೆ ತಕರಾರು ಎಂಬುದಕ್ಕಿಂತಲೂ ಅನುಮಾನವಿದೆ. ಸಾಧಾರಣವಾಗಿ ಕವಿತೆಗಳು ದುಃಖ, ವಿಷಾದ ದೂರ ಮಾಡುವ ಗುಣ ಹೊಂದಿರುತ್ತವೆ. ಆದರೆ, ಶಿವಪ್ರಕಾಶ್ ಅವರ ಕಾವ್ಯ ಓದಿದ ಮೇಲೂ ಒಂದು ವಿಷಾದ, ದುಃಖ ಉಳಿಯುತ್ತದೆ. ಅಂತರಂಗದ ಚದುರದ ಸಂತೆಯ ವೌನಗಳಿಗೆ ಬಟ್ಟೆ ತೊಡಿಸಿ ಹೊರ ಬಿಟ್ಟಾಗ ಕಾವ್ಯ ಹುಟ್ಟುತ್ತದೆ ಎನಿಸುತ್ತದೆ. ಅಂತಹ ಕಾವ್ಯಗಳು ಶಿವಪ್ರಕಾಶ್ ಅವರದ್ದು ಎಂದರು.
ಆದರೆ, ಅಧ್ಯಕ್ಷೀಯ ಭಾಷಣ ಮಾಡಿದ ಡಾ.ರಾಜೇಂದ್ರ ಚೆನ್ನಿ ಮಾತ್ರ ಈ ಅಭಿಪ್ರಾಯ ಒಪ್ಪಲಿಲ್ಲ. ನಾವು ಹಳೆಯ ಸಿದ್ಧ ಚೌಕಟ್ಟಿಗೆ ಅಂಟಿಕೊಳ್ಳುವುದು ಸರಿಯಲ್ಲ. ಶಿವಪ್ರಕಾಶರ ಆರಂಭಿಕ ಕಾವ್ಯಕ್ಕೂ ಈಗಿನ ಕಾವ್ಯಕ್ಕೂ ಬದಲಾವಣೆ ಇದೆ. ಇಲ್ಲಿನ ಕವಿತೆಗಳಲ್ಲಿ ತಲ್ಲಣವಿಲ್ಲ. ಕವಿತೆಗಳಲ್ಲಿ ವಿಷಾದವಿದೆ ಎಂಬುದನ್ನು ನಾನು ಯಾವುದೇ ವಿಷಾದ ಇಲ್ಲದೆ ನಿರಾಕರಿಸುತ್ತೇನೆ ಎಂದು ಕೃತಿ ವಿಮರ್ಶೆ ಮಾಡಿದ ಇಬ್ಬರಿಗೂ ಟಾಂಗ್ ಕೊಟ್ಟರು.
ತಕರಾರಿನ ಬಗ್ಗೆ ಸ್ಪಷ್ಟನೆ ನೀಡಿದ ಎಚ್.ಎಸ್.ಶಿವಪ್ರಕಾಶ್, ತಕರಾರುಗಳು ಬರದಿದ್ದರೆ ಸಂಸ್ಕೃತಿ ಮುಂದುವರಿಯಲ್ಲ. ನನ್ನ ಮೆಚ್ಚಿನ ಕವಿಗಳಾದ ಕುವೆಂಪು, ಕೆ.ಎಸ್.ನರಸಿಂಹಸ್ವಾಮಿ ಅವರ ಬಗ್ಗೆ ನನಗೆ ತಕರಾರು ಇಲ್ಲದಿದ್ದರೆ ಕವಿತೆ ಬರೆಯುವ ಕುಮ್ಮಕ್ಕು ನನಗೆ ಸಿಕ್ಕುತ್ತಿರಲಿಲ್ಲ. ಇವತ್ತಿನ ಸಮಾಜದಲ್ಲಿ ಯಾವುದನ್ನು ಸಂಭ್ರಮಿಸಬೇಕು ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ. ಗ್ಲೋಬಲೀಕರಣವನ್ನೋ, ಭಾರತ ಒಂದು ಆರ್ಥಿಕ ಶಕ್ತಿ ಎಂಬ ಮಿಥ್ಯೆಯನ್ನೋ, ಸಿದ್ಧಾಂತಗಳನ್ನೋ? ಯಾವುದನ್ನು ಸಂಭ್ರಮಿಸೋಣ?
ಸಂಭ್ರಮಿಸಲು ನನಗೆ ಇಲ್ಲಿ ಯಾವೊಂದು ಕಾರಣವೂ ಸಿಕ್ಕುತ್ತಿಲ್ಲ. ಹಾಗಾಗಿಯೇ ನಾನು ಕವಿತೆಗಳಲ್ಲಿ ವಿಷಾದವನ್ನು ಹೊರಗಿಡುತ್ತಿದ್ದೇನೆ. ಕವಿತೆ ಬರೆಯಲು ನನಗೆ ಬೇರೆ ದಾರಿ ಇಲ್ಲ. ನನ್ನ ವಿಪತ್ತು, ದುಃಖ, ವಿಷಾದವೇ ನನಗೆ ಸಂಭ್ರಮ. ಈಗ ನನಗೆ ಎದುರಾಳಿಗಳಿಲ್ಲ. ಇಡೀ ಜಗತ್ತು ಹಾಳಾಗಿದ್ದೇ ಎದುರಾಳಿ ಇದ್ದಾನೆಂಬ ವಿಭಜನಾತ್ಮಕ ದೃಷ್ಟಿಕೋನದಿಂದ. ಮತ್ತೊಬ್ಬನನ್ನು ತುಳಿದು ಬೆಳೆಯುವ ಧಾವಂತದಿಂದ ಜಗತ್ತು ಹಾಳಾಗುತ್ತಿದೆ. ಇಂತಹ ವಿಷಾದ ನನ್ನನ್ನು ಕಾಡುತ್ತದೆ ಎಂದರು.
ಮರೆತುಹೋದ ದೊಂಬರಾಕೆ ಕೃತಿಯ ಮೂಲ ಲೇಖಕಿ ಇಟಲಿಯ ಜಿಂಗೋನಿಯಾ ಜಿಂಗೋನೆ ಕವಿತೆಗಳನ್ನು ವಾಚಿಸಿದರು. ಅಧ್ಯಕ್ಷತೆ ವಹಿಸಿದ್ದ ಪ್ರೊ.ರಾಜೇಂದ್ರ ಚೆನ್ನಿ, ಲೇಖಕಿ ಎಚ್.ಎಸ್.ಅನುಪಮಾ ಮಾತನಾಡಿದರು. ಪೂಜಾ ಪ್ರಾರ್ಥಿಸಿ, ಅಹರ್ನಿಶಿ ಪ್ರಕಾಶನದ ಅಕ್ಷತಾ ಸ್ವಾಗತಿಸಿದರು. ನಾಗಭೂಷಣ ನಿರೂಪಿಸಿದರು.
ವಿಜಯ ಕರ್ನಾಟಕ

Monday, August 27, 2012

ಅಮೇರಿಕಾದ ಹಲವಾರು ನಗರಗಳಲ್ಲಿ ತೆಂಕುತಿಟ್ಟು ಯಕ್ಷಗಾನದ ಪ್ರದರ್ಶನ

2005ರಿಂದ ಹಿಂದೀ ಮತ್ತು ಕನ್ನಡ ಯಕ್ಷಗಾನಗಳ ಮೂಲಕ ದೇಶದ 19ರಾಜ್ಯಗಳಲ್ಲಿ, 300 ಕ್ಕೂ ಹೆಚ್ಚಿನ ಪ್ರದರ್ಶನಗಳನ್ನು
ನಡೆಸಿದ ಯಕ್ಷ ಮಂಜೂಷ ತಂಡ, ಈ ವರ್ಷ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಯಕ್ಷೋತ್ಸವವನ್ನು ಆಯೋಜಿಸಿದೆ. ಆಗಸ್ಟ್
30ರಿಂದ ಅಕ್ಟೋಬರ್ 29ರ ತನಕ, ಅಂದರೆ, ಎರಡು ತಿಂಗಳ ಕಾಲ ಅಮೇರಿಕಾದಲ್ಲೆಲ್ಲಾ ತಿರುಗಾಟ ನಡೆಸುವ
ಯಕ್ಷಮಂಜೂಷದ ಮೊದಲ ಪ್ರದರ್ಶನ ನಡೆಯುವುದು ಅಟ್ಲಾಂಟಾದಲ್ಲಿ.
ಆಗಸ್ಟ್ 31ರಿಂದ ಸೆಪ್ಟಂಬರ್ 2ರ ತನಕ ನಡೆಯಲಿರುವ ‘ಅಕ್ಕಾ’ದ ವಿಶ್ವ ಕನ್ನಡ ಸಮ್ಮೇಳನದಲ್ಲಿ ತೆಂಕುತಿಟ್ಟು ಯಕ್ಷಗಾನದ ಪ್ರದರ್ಶನ ನೀಡಲಿರುವ ಶ್ರೀಮತಿ ವಿದ್ಯಾ ಕೋಳ್ಯೂರು ನೇತೃತ್ವದ ಯಕ್ಷ ಮಂಜೂಷ ತಂಡ, ತದನಂತರ, ಅಮೇರಿಕಾದಲ್ಲಿ ವಾಸ್ತವ್ಯವಿರುವ ಎರಡು ತಿಂಗಳ ಅವಧಿಯಲ್ಲಿ ಸುಮಾರು 10 ನಗರಗಳಲ್ಲಿ ತೆಂಕುತಿಟ್ಟು ಶೈಲಿಯ ಯಕ್ಷಗಾನ ಪ್ರದರ್ಶನಗಳನ್ನು ನಡೆಸಲಿದೆ. ತೆಂಕುತಿಟ್ಟು ಯಕ್ಷಗಾನದ ಇತಿಹಾಸದಲ್ಲಿ, ಅಮೇರಿಕಾದಲ್ಲಿ ಹಲವಾರು ಕಡೆ ಪ್ರದರ್ಶನ ನೀಡಿದ ಮೊಟ್ಟಮೊದಲ ವೃತ್ತಿಪರ ತಂಡ ಇದಾಗಲಿದೆ.
ಅಟ್ಲಾಂಟಾ, ರ್ಯಾಲಿ, ರಿಚ್‌ಮಂಡ್, ನ್ಯೂಜರ್ಸಿ, ನ್ಯೂಯಾರ್ಕ್, ಬಾಸ್ಟನ್, ಕ್ಯಾಲಿಫೋರ್ನಿಯಾಗಳಲ್ಲಿ ಈಗಾಗಲೇ ಕಾರ್ಯಕ್ರಮಗಳು ನಿಗದಿತವಾಗಿದ್ದು, ಇನ್ನೂ ಹಲವಾರು ನಗರಗಳಲ್ಲಿ ತೆಂಕುತಿಟ್ಟು ಯಕ್ಷಗಾನ ಪ್ರದರ್ಶನಗಳು ನಡೆಯಲಿವೆ.
ಆಗಸ್ಟ್ 31ರಿಂದ ಅಕ್ಟೋಬರ್ 29ರ ತನಕ ಅಮೇರಿಕಾದಲ್ಲಿರುವ ಯಕ್ಷಮಂಜೂಷ, ತೆಂಕುತಿಟ್ಟು ಯಕ್ಷಗಾನದ ಪ್ರಚಾರ-
ಪ್ರಸಾರದ ಪ್ರತಿಯೊಂದು ಅವಕಾಶಗಳನ್ನು ಸಹ  ಬಳಸಿಕೊಳ್ಳಲಿದೆ. ಅಂತರರಾಷ್ಟ್ರೀಯ ದೇಶಗಳೊಡನೆ ಸಾಂಸ್ಕೃತಿಕ
ಸಂಬಂಧವೇರ್ಪಡಿಸುವುದಕ್ಕಾಗಿಯೇ ಭಾರತದ ವಿದೇಶಾಂಗ ವ್ಯವಹಾರ ಖಾತೆಯ, ಸಾಂಸ್ಕೃತಿಕ ಸಂಬಂಧಗಳಿಗಾಗಿರುವ
ಭಾರತೀಯ ಮಂಡಳಿ (Indian Council for Cultural Relations -ICCR) ಯಕ್ಷಮಂಜೂಷದ 10ಮಂದಿ ಕಲಾವಿದರನ್ನು  ಮಂಗಳೂರಿನಿಂದ ಕಳುಹಿಸಿಕೊಡುವ ಹಾಗೂ ಕರೆತರುವ ಪ್ರಯಾಣ ವೆಚ್ಚವನ್ನು ಪ್ರಾಯೋಜಿಸಿ ಈ ಅಭಿಯಾನದ  ಹೊರೆಯನ್ನು ಹೊತ್ತುಕೊಂಡಿದೆ. ಯಕ್ಷಗಾನದ ಸಾಗರೋಲ್ಲಂಘನಕ್ಕಾಗಿ ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಶ್ರೀ ಶ್ರೀನಿವಾಸ ಜಿ ಕಪ್ಪಣ್ಣನವರು ಆಮಂತ್ರಣ ಇತ್ತು ಮಾರ್ಗದರ್ಶನ ಮಾಡಿದ್ದಾರೆ.
ಶ್ರೀಮತಿ ವಿದ್ಯಾ ಕೋಳ್ಯೂರವರ ನೇತೃತ್ವದಲ್ಲಿ ಅಮೇರಿಕಾ ಪ್ರವಾಸ ಕೈಗೊಳ್ಳುತ್ತಿರುವ ಈ ತಂಡದಲ್ಲಿ, ಸರವು ಕೃಷ್ಣ
ಭಟ್ ನಿರ್ವಹಣೆಯನ್ನು ನೋಡಿಕೊಳ್ಳುತ್ತಾರೆ. ಭಾಗವತರಾಗಿ ತೆಂಕುತಿಟ್ಟಿನ ಜನಪ್ರಿಯ ಪ್ರಾತಿನಿಧಿಕ ಭಾಗವತ ಶ್ರೀ ಪುತ್ತಿಗೆ
ರಘುರಾಮ ಹೊಳ್ಳರು, ಮದ್ದಳೆ ವಾದಕರಾಗಿ ಪಳಗಿದ ಕೈಯೆಂದೇ ಜನಪ್ರಿಯರಾಗಿರುವ ಶ್ರೀ ಪದ್ಯಾಣ ಜಯರಾಮ ಭಟ್,
ಚೆಂಡೆ ವಾದಕರಾಗಿ ಉದಯೋನ್ಮುಖ ಕಲಾವಿದ ಪದ್ಯಾಣ ಚೈತನ್ಯ ಕೃಷ್ಣ ಭಾಗವಹಿಸಲಿದ್ದಾರೆ.
ಮುಮ್ಮೇಳದಲ್ಲಿ, ಸುಪ್ರಸಿದ್ಧ ಪುಂಡುವೇಷಧಾರಿ ಶ್ರೀ ಚಂದ್ರಶೇಖರ ಧರ್ಮಸ್ಥಳ, ಹಾಸ್ಯಗಾರರಾಗಿ ಶ್ರೀ ಧರ್ಮಸ್ಥಳ
ಮೇಳದ ಹಾಸ್ಯಗಾರ ಶ್ರೀ ಮಹೇಶ ಮಣಿಯಾಣಿ, ಬಣ್ಣದ ವೇಷಧಾರಿಯಾಗಿ ತೆಂಕುತಿಟ್ಟಿನ ಇನ್ನೋರ್ವ ಸುಪ್ರಸಿದ್ಧ ಕಲಾವಿದ ಶ್ರೀ ಹರಿನಾರಾಯಣ ಭಟ್ ಎಡನೀರು, ಹಾಗೂ ಕಟೀಲು ಶ್ರೀ ದುರ್ಗಾಪರಮೇಶ್ವರೀ ಮೇಳದ ಜನಪ್ರಿಯ ಯುವ
ಕಲಾವಿದರುಗಳಾದ ಪ್ರಶಾಂತ ಶೆಟ್ಟಿ ನೆಲ್ಯಾಡಿ, ಹಾಗೂ ಬೆಳ್ಳಿಪ್ಪಾಡಿ ಮೋಹನ ಈ ತಂಡದಲ್ಲಿ ಭಾಗವಹಿಸುತ್ತಿದ್ದಾರೆ. ಅಕ್ಟೋಬರ್ 31ರಂದು ಮುಂಜಾನೆ ಈ ತಂಡ ಮರಳಿ ತವರೂರಿಗ ಬರಲಿದೆ.
 

Wednesday, August 15, 2012

ಕವನ: ವಾಸ್ತವ


ರೆಕ್ಕೆ ಬಿಚ್ಚಿದೆ ಎನ ಮನದ ಹಕ್ಕಿ
ಹಾರುತ್ತಿದೆ ಕನಸಿನ ಲೋಕದಲ್ಲಿ

ತ೦ಗಾಳಿ ತ೦ಪಲ್ಲಿ
ತಾಪವಿಲ್ಲದ ತಾಣದಲಿ
ತಲ್ಲಣಪಡಿಸದ ಎಳೆ ಬಿಸಿಲಿನಲಿ
ಹಾರಿದೆ ಎನ ಮನಸ್ಸಿನ ಹಕ್ಕಿ ರೆಕ್ಕೆ ಬಲಿಯುತ್ತಿದ್ದ ಹಕ್ಕಿ

ನೀಲಿಬೆಟ್ಟಗಳ ದಾಟುತ್ತಾ
ನೀಲಿ ಕಡಲ ಮೇಲೆ ಹಾರುತ್ತಾ
ಗಗನವ ಮುಟ್ಟುತ್ತಾ
ಹಾರಿದೆ ಎನ ಮನದ ಹಕ್ಕಿ
ಎನ ಮನದ ಹಕ್ಕಿ ರೆಕ್ಕೆ ಬಲಿಯುತ್ತಿದ್ದ ಹಕ್ಕಿ

ಕಡಲದಕ್ಕೆ ಕೆರೆಯಾಯಿತು
ಬೆಟ್ಟ ಮ೦ದಿರದ೦ತೆ ಭಾಸವಾಯಿತು
ಗಗನ ಆ ಪುಟ್ಟ ಮ೦ದಿರದ ಉಪ್ಪರಿಗೆಯಾಯಿತು
ಹೀಗೆ ಸ೦ತಸದಿ ಹಾರಿದೆ
ಎನ ಮನದ ಹಕ್ಕಿ ರೆಕ್ಕೆ ಬಲಿಯುತ್ತಿದ್ದ ಹಕ್ಕಿ

ಜೀವನಾಮೃತವ ತೊರೆದು
ಅಮೃತವನ್ನೆ ಕುದಿಯಿತು
ತನಗಾರು ಸಾಟಿ ಎ೦ದು ಮೆರೆಯಿತು, ಮುನ್ನುಗ್ಗಿತು
ಎನ ಮನದ ಹಕ್ಕಿ
ಎನ ಮನದ ಹಕ್ಕಿ ರೆಕ್ಕೆ ಬಲಿತ ಹಕ್ಕಿ

ಜವ್ವನ ಕಳೆಯಿತು
ಜೀವನದ ವಾಸ್ತವಕ್ಕೆ ಮತ್ತೆ ಬರಲು ಇಚ್ಚಿಸಿತು
ಆಯಿತು ಎಲ್ಲಾ ಅದಲು ಬದಲು
ಮರುಗಿತು ಎನ ಮನದ ಹಕ್ಕಿ
ಎನ ಮನದ ಹಕ್ಕಿ ರೆಕ್ಕೆ ಬಲಿತ ಹಕ್ಕಿ

ತ೦ಗಾಳಿ ಬಿರುಗಾಳಿಯಾಯಿತು
ಎಳೆ ಬಿಸಿಲು ನಡುಮಧ್ಯಾಹ್ನದ ಬಿಸಿಲಾಯಿತು
ತಾಪದಲ್ಲಿ ತಲ್ಲಣಪಟ್ಟಿತು
ಕನಸ್ಸಿನ ಲೋಕವ ನೆನೆದು ಮರುಗಿತು
ಎನ ಮನದ ಹಕ್ಕಿ ಮುದಿಯ ಹಕ್ಕಿ
ಪುಟ್ಟ ಪುಟ್ಟ ನೀಲಿ ಬೆಟ್ಟ ಬೆಳೆದು ಹಸಿರಾಯಿತು
ಕೆರೆ ದಾಟಲಾಗದ ಕದಲಾಯಿತು
ಗಗನ ಮುಟ್ಟಲಾಗದ ಪರದೆಯಾಯಿತು
ಹೀಗೆ ಚಿ೦ತೆಯಲಿ ಬೆ೦ದಿತು
ಎನ ಮನದ ಹಕ್ಕಿ ಮುದಿಯ ಹಕ್ಕಿ

ಜೀವನಾಮೃತವ ತ್ಯಜಿಸಿದ ಹಕ್ಕಿಗೆ 
ಮತ್ತೆ ಅದು ಬೇಕೆನಿಸಿದಾಗ ಸಿಗದೆ ಹೋಯಿತು
ಹೀಗೆ ಮರುಗಿ ಮರುಗಿ ಮತ್ತಷ್ಟು ಮುದಿಯಾಯಿತು
ಎನ ಮನದ ಹಕ್ಕಿ
ಎನ ಮನದ ಹಕ್ಕಿ ವಾಸ್ತವ ಅರಿತ ಹಕ್ಕಿ


ಲಿವ್ಯಾ ಕುಕುನೂರು

President’s Address to the Nation

Shri Pranab Mukherjee
It is a great privilege to address, for the first time, my fellow Indians living within our country and in a hundred corners across the globe, on the 65th anniversary of our independence. Words cannot adequately express my gratitude to the people and their representatives for the honour of this high office, even as I am deeply conscious of the fact that the highest honour in our democracy does not lie in any office, but in being a citizen of India, our motherland. We are all equal children before our mother; and India asks each one of us, in whatsoever role we play in the complex drama of nation-building, to do our duty with integrity, commitment and unflinching loyalty to the values enshrined in our Constitution.
 It is important to remember, on Independence Day, that in the age of empires freedom was never given; it was taken. It was won by a generation of giants, led by a mighty man of destiny, Mahatma Gandhi, who fought with selfless, unflinching conviction against the mightiest power in history, with a moral force that transformed political thought and whose reverberations echo in great events all around us today. If the rise of European colonisation began in 18th century India, then the rallying cry of "Jai Hind!" also signalled its end in 1947. The final call to victory, "Jai Hind!" was given by Subhas Chandra Bose, fondly known to every Indian as "Netaji". Pt. Jawaharlal Nehru, Baba Saheb Ambedkar, Sardar Vallabhbhai  Patel, Maulana Abul Kalam Azad, Sarojini Naidu and many others charted the roadmap of independent India. These extraordinary men and women sacrificed their todays for our tomorrows. That tomorrow has come, and there is a question we must ask ourselves: have we honoured the great vision of these stalwarts, as a nation and as a society? 
 I was a toddler when Netaji, as Rashtrapati of the 51st Session of Indian National Congress in Haripura, on the banks of the river Tapti, reminded us that "our chief national problems are eradication of poverty, illiteracy and disease". His speech echoed through my home, as it did through millions of others. My father was a freedom fighter and through those long years when freedom seemed an illusion, we were sustained by faith in ourselves, in our leaders, in the strength of non-violence, in the courage of Indians liberated from fear. But we knew then, as we do now, that freedom must mean both bread and dreams.
Netaji and Nehruji believed that India could seize the future by an application of synthesis, samyavada, of what might seem on surface to be implacable opposites. They believed that free India would become, by example, an alternative model for a post-colonial world through economic equity and a social revolution inspired by harmony between communities that had been misled into hostility. Propelled by freedom of faith, gender equality and economic justice for all, India will become a modern nation. Minor blemishes cannot cloak the fact that India is becoming such a modern nation: no faith is in danger in our country, and the continuing commitment to gender equality is one of the great narratives of our times.

My fellow citizens:
  I am not a pessimist; for me, the glass is always half full, rather than half empty. I would go to the extent of saying that the glass of modern India is more than half full. Our productive working class; our inspiring farmers, who have lifted a famine-wrecked land to food-surplus status, our imaginative industrialist entrepreneurs, whether in the private or public sector; our intellectuals, our academics and our political class have knit together a modern nation that has leapt, within mere decades, across many centuries in economic growth and progressive social legislation.
We cannot appreciate how far we have travelled, until we understand from where we started in 1947. As Jawaharlal Nehru pointed out so often, in his speeches and prose, India was not a poor country when our independence was snatched away. No one, I may add, travels thousands of miles to conquer a poor country. Statistics published by contemporary international scholars are proof for sceptics. In 1750, seven years before the fateful battle of Plassey, India had 24.5% of World Manufacturing Output while United Kingdom had only 1.9%. In other words, one in every four goods on the world market was manufactured in India. By 1900, India had been left with only 1.7% of World Manufacturing Output and Britain had risen to 18.5%. The western industrial revolution was in its incipient stages in the 18th century, but even in this regard India slipped from 7 to 1 in per capita industrialisation in that period, while Britain vaulted from 10 to 100. Between 1900 and 1947 India`s economic growth was an annual average of 1%.  From such depths we climbed, first, to 3% growth, and then took a quantum leap forward: today, despite two great international crises that rocked the world and some domestic dips, we have posted an average growth rate of more than 8% over the last seven years.
                                                 
 If our economy has achieved critical mass, then it must become a launching pad for the next leap. We need a second freedom struggle; this time to ensure that India is free for ever from hunger, disease and poverty. As my pre-eminent predecessor Dr Sarvepalli Radhakrishnan, speaking from this platform on the 18th anniversary of freedom, said, "Economic progress is one of the tests of democracy."
  If progress falls behind rising aspirations, particularly of the young, rage will manifest itself. We are a nation that is becoming younger both in age and spirit; this is an opportunity as well as a challenge. The young thirst for knowledge that will lift their skills; and for opportunity that will put India on the fast track to the first world. They have the character; they need the chance. Education is the seed; and economy is the fruit. Provide good education; disease, hunger and poverty will recede. As I said in my acceptance speech, our motto must be: All for knowledge and knowledge for all. Vision cannot be an open-ended vista; it must be focused on our youth.
                                        
My fellow citizens:      

9.         Notwithstanding the tremendous pressure of an adverse external environment, our economy today is more resilient and confident. Two decades of steady economic reforms have contributed to improvement in average income and consumption levels in both rural and urban areas. There is new found dynamism in some of the most backward areas bringing them into national economic mainstream. Yet there are several gaps that need to be bridged. Green revolution has to be extended to the eastern region of our country. Creation of high quality infrastructure has to be fast tracked. Education and health services have to reach the last man at the earliest. Much has been done, a lot more remains to be done.
  The monsoon has played truant this year. Large areas of our country are in the grip of drought, some others are devastated by floods. Inflation, particularly food inflation, remains a cause of worry, While our food availability remains healthy, we cannot forget the plight of those who made this possible even in a lean year; our farmers. They have stood by the nation in its need; the nation must stand by them in their distress.
 I do not believe that there is any inherent contradiction in protecting our environment and economic development. As long as we heed Gandhiji`s great lesson: there is sufficient in the world for man’s need but not for man’s greed, we are safe. We must learn to live in harmony with nature. Nature cannot be consistent; we must be able to conserve her bounty during the many seasons of plenty so that we are not bereft during the occasional bout of scarcity.
  Anger against the bitter pandemic of corruption is legitimate, as is the protest against this plague that is eroding the capability and potential of our nation. There are times when people lose their patience but it cannot become an excuse for an assault on our democratic institutions.

13.       Institutions are the visible pillars of our Constitution, and if they crack then the idealism of our Constitution cannot hold. They are the interface between principles and the people. Our institutions may have suffered from the weariness of time; the answer is not to destroy what has been built, but to re-engineer them so that they become stronger than before. Institutions are the guardians of our liberty.

14.       The vigilance on our frontiers has to be matched with vigilance within; we must restore the credibility of those areas of our polity, judiciary, executive and legislature where complacency, exhaustion or malfeasance may have clogged delivery. The people have a right to express their discontent. But we must also understand that legislation cannot be wrenched away from the legislature or justice from the judiciary.
  When authority becomes authoritarian, democracy suffers; but when protest becomes endemic, we are flirting with chaos. Democracy is a shared process. We all win or lose together. Democratic temper calls for dignity of behaviour and tolerance of contrary views. Parliament will live by its own calendar and rhythm. Sometimes that rhythm sounds a bit atonal; but in a democracy there is always judgement day, an election. Parliament is the soul of the people, the “Atman” of India. We challenge its rights and duties at our peril.
  I say this not in a spirit of admonition, but as a plea for greater understanding of the existential issues that lurk behind the mask of the mundane. Democracy is blessed with a unique opportunity for redress of grievances through the great institution of accountability - free elections.
   Old fires that threaten the stability of our nation have not been fully doused; the ash continues to smoulder. It is particularly painful for me to witness the violence in Assam. Our minorities need solace, understanding and protection from aggression. Violence is not an option; violence is an invitation to greater violence. Concrete attempts have been made to heal the wounds of Assam, including the Assam accord conceived by our young and beloved former Prime Minister Rajiv Gandhi. We should revisit them, and adapt them to present conditions in the spirit of justice and national interest. We need peace for a new economic surge that eliminates the competitive causes of violence.
  It is a fact of our geopolitical environment that some problems transcend borders. SAARC was created 27 years ago to find solutions through dialogue, and by mutual cooperation create the rapid economic growth that is the only long-term answer to problems like migration and uneven development. SAARC must acquire vigour to fulfil its mandate.
 The SAARC should be a major instrument in the common war against terrorists. Great success is possible by international cooperation. All SAARC nations must cooperate to bring to justice those who believe in mayhem against innocents. There is no other way towards peace on the subcontinent.
  I am proud of our brave armed forces and our valiant police forces, who have done so much, at such great personal risk, to curb this menace of terrorism. It is their vigilance which has prevented more havoc. If we sleep in peace it is because they are awake and vigilant in the desolation of desert and mountain and forest; and in the vast loneliness of the seas. I salute their commitment and their patriotism. It is heartening that the armed forces not only guarantee our peace, but also produce medal winners at Olympics. I congratulate all who have done their nation proud at the recently concluded Games, by winning as well as by participating. The number of trophies may not be too large but it is a remarkable improvement upon the last count, Four years later, when I hope to address you again, I am sure, we will celebrate a medals spring.

My fellow citizens:
   If there is one man in history whose name is synonymous with peace, then it is Gandhiji, the architect of our independence. India is a land of plenty inhibited by poverty; India has an enthralling, uplifting civilization that sparkles not only in our magnificent art, but also in the enormous creativity and humanity of our daily life in city and village. When Indira Gandhi reached for the stars, she believed that this would be within the grasp of India in just another generation. But there is neither a present nor a future, except in a climate and culture of national unity and brotherhood.

My fellow citizens:

Let us leave behind the way of hatred, violence and anger;
Let us put aside our petty quarrels and factions. 
Let us work together for our nation with the devotion of a child towards a mother.
Let us repose our faith in this invocation from Upanishads:
May God Protect us.
May God Nourish us.
May we Work Together with Vigour and Energy.
May our Studies be Brilliant.
May there be no Hostility amongst us.
May there be Peace Peace Peace.

Peace must be our ideology, progress our horizon.

Jai Hind!

Friday, August 10, 2012

Tuesday, August 7, 2012

ನಮ್ಮ ಮಕ್ಕಳಿಗೆ ಕರ್ನಾಟಕದ ಯಾವ ಮೌಲ್ಯಗಳ ಬಗ್ಗೆ ಹೇಳೋಣ?

ಸನ್ಮಾನ್ಯ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ ಅವರಿಗೆ ವಂದನೆಗಳು.

ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ತಮಗೆ ದೂರದ ದೆಹಲಿಯಿಂದ ಅಭಿನಂದನೆಗಳು. ಸಾಮಾನ್ಯವಾಗಿ ಸಂವೇದನಾ ರಹಿತ ರಾಜಕಾರಣಿಗಳಿಗೆ ಪತ್ರ ಬರೆಯವಷ್ಟು ದಡ್ಡರಲ್ಲ ನಾವು. ಆದರೂ ತಾವು ಬೇಂದ್ರೆಯವರನ್ನು ಓದಿದ್ದೀರಿ, ಕಂಬಾರರ ನಾಟಕಗಳನ್ನು ನೋಡಿದ್ದೀರಿ ಅಂತ ಗೊತ್ತಿರುವುದರಿಂದ ಈ ಧೈರ್ಯ ಮಾಡುತ್ತಿದ್ದೇನೆ.
ನಾನು ಮತ್ತು ನನ್ನಂಥ ಹಲವರು ಕರ್ನಾಟಕದಲ್ಲಿ  ಹುಟ್ಟಿ ಬೆಳೆದು ಕಾರಣಾಂತರದಿಂದ ಕರ್ನಾಟಕವನ್ನು ಬಿಟ್ಟು ಹೊರಗೆ ಬಂದವರು. ಹುಟ್ಟಿದ ನೆಲದಿಂದ ದೂರ ಹೋದಷ್ಟೂ ಭಾವುಕವಾಗಿ ಕರ್ನಾಟಕಕ್ಕೆ ನಾವು ಅಂಟಿಕೊಳ್ಳುತ್ತಾ ಹೋಗುತ್ತೇವೆ. ನಮ್ಮ ಮಕ್ಕಳಿಗೆ ಕನ್ನಡ ಭಾಷೆಯನ್ನು ಹೇಳಿಕೊಡುತ್ತಾ ಅವರಿಂದ ಕನ್ನಡ-ಕರ್ನಾಟಕ ದೂರವಾಗದಂತೆ ನೋಡಿಕೊಳ್ಳುತ್ತೇವೆ.
ಆದರೆ ಈಚೆಗೆ ಯಾಕೋ ನಮಗೆಲ್ಲ ಉತ್ಸಾಹ ಬತ್ತಿದೆ. ನಮ್ಮ ಬಾಯಿ ಕಟ್ಟಿದೆ. ಮಾತುಗಳು ಗಂಟಲಿಂದ ಈಚೆಗೆ ಬರುತ್ತಿಲ್ಲ. ನಮ್ಮ ಮಕ್ಕಳಿಗೆ ಕರ್ನಾಟಕದ ಯಾವ ಮೌಲ್ಯಗಳ ಬಗ್ಗೆ ಹೇಳೋಣ? ಈಚಿನ ಮಂಗಳೂರು ಘಟನೆ ಅತ್ಯಂತ ಹೇಯವಾಗಿದ್ದು, ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಪ್ರತಿಷ್ಠೆಗೆ ಅತೀವ ಧಕ್ಕೆಯಾಗಿದೆ.
ಇದೀಗ ಕರ್ನಾಟಕ ಬರದಿಂದ ತತ್ತರಿಸುತ್ತಿದೆ. ತಾವು ಕೇಂದ್ರ ಸರ್ಕಾರದಿಂದ ೨೦೦೦ ಕೋಟಿ ರೂಪಾಯಿಗಳ ಪರಿಹಾರವನ್ನೂ ಕೇಳಿದ್ದೀರಿ. ಒಂದು ವೇಳೆ ಅಷ್ಟು ಹಣ ಬಂದರೂ ಅದನ್ನು ಸರಿಯಾಗಿ ವಿನಿಯೋಗ ಮಾಡಲು ಭ್ರಷ್ಟಾಚಾರದಲ್ಲಿ ಮುಳುಗಿ ಹೋದ, ವರ್ಷ ಕಳೆದರೂ ಲೋಕಾಯುಕ್ತರಿಲ್ಲದ ತಮ್ಮ ಸರ್ಕಾರಕ್ಕೆ ಸಾಧ್ಯವಾದೀತೇ? ಹಿಂದೆ ಮಹಾಪೂರ ಬಂದು ಉತ್ತರ ಕರ್ನಾಟಕ ತತ್ತರಿಸುತ್ತಿರುವಾಗ ನಿಮ್ಮಲ್ಲಿನ ಹಲವು ಜನಪ್ರತಿನಿಧಿಗಳು ಆಂಧ್ರ ಪ್ರದೇಶದಲ್ಲಿನ ರೆಸಾರ್ಟಗಳಲ್ಲಿ ಆರಾಮವಾಗಿದ್ದೀರಿ.
ನಿಮ್ಮದೇ ಸರ್ಕಾರದ ಮುಖ್ಯಮಂತ್ರಿಗಳು ಬಜೆಟ್ ಮಂಡನೆ ಮಾಡುವಾಗಲೂ ನಿಮ್ಮವರು ಮತ್ತೆ ರೆಸಾರ್ಟಲ್ಲಿದ್ದರು.  ಇಲ್ಲಿ ಒಳ್ಳೆಯದಾಗುತ್ತದೆ, ಜನಗಳ ಉಪದ್ರವ ಇಲ್ಲ  ಅಂತ ಒಬ್ಬ ಮಂತ್ರಿ ಅಪ್ಪಣೆ ಕೊಡಿಸಿದರು. ತಮ್ಮದೇ ಜನ ಡಾ. ವಿ. ಎಸ್. ಆಚಾರ್ಯರಿಗೆ ಸದನದಲ್ಲಿ  ಒಂದು ಹನಿ ಕಣ್ಣೀರು ಸುರಿಸುವ ಔದಾರ್ಯವಿಲ್ಲದವರಿಂದ ಮಂಗಳೂರಿನಲ್ಲಿ  ಹಲ್ಲೆಗೊಳಗಾದ ಹೆಣ್ಣು ಮಕ್ಕಳು ಯಾವ ಅನುಕಂಪವನ್ನು ನಿರೀಕ್ಷಿಸಬಹುದು? 
ಏನೇ ಇರಲಿ. ಉಳಿದ ಅವಧಿಗೆ ತಾವು ಮುಖ್ಯಮಂತ್ರಿಯಾಗಿರುತ್ತೀರಿ ಅಂತ ನಾವೆಲ್ಲ ಭಾವಿಸುತ್ತೇವೆ. ಈ ಸಣ್ಣ ಅವಧಿಯಲ್ಲಿ ನಾವೆಲ್ಲ ನೆನಪಿಟ್ಟುಕೊಳ್ಳುವಂತ ಕೆಲವು ಕೆಲಸಗಳನ್ನಾದರು ಮಾಡಿರಿ. ಕಳೆದ ಕೆಲವು ವರ್ಷಗಳಿಂದ ಕರ್ನಾಟಕ ರಾಜ್ಯವು ರಾಷ್ಟ್ರೀಯವಾಗಿ ಮತ್ತು ಜಾಗತಿಕವಾಗಿ ತುಂಬಾ ಹಿಂದೆ ಹೋಗಿಬಿಟ್ಟಿದೆ. ರಾಷ್ಟ್ರಮಟ್ಟದಲ್ಲಿ ನಾವು ಪೂರ್ತಿ ಬತ್ತಲಾಗಿದ್ದೇವೆ. ನಮ್ಮ ಮಕ್ಕಳೇ ನಮ್ಮನ್ನು ಹಾಸ್ಯ ಮಾಡುವ ಪ್ರಸಂಗ ಉಂಟಾಗಿದೆ.
ತಮಗೆ ಸಾಧ್ಯವಾದರೆ ಕೆಳಗೆ ಸೂಚಿಸಿದ ಅಂಶಗಳಲ್ಲಿ ಕೆಲವನ್ನಾದರೂ ಮಾಡಿ, ಕರ್ನಾಟಕದ ಘನತೆಯನ್ನು ಹೊರನಾಡಿನಲ್ಲಿ ಎತ್ತರಿಸಲು ಪ್ರಯತ್ನಿಸಿ ಅಂತ ವಿನಂತಿಸಿಕೊಳ್ಳುತ್ತೇನೆ-

೧.ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಕ್ರಮ ಕೈಗೊಳ್ಳಿರಿ.
೨.ದೆಹಲಿಗೆ ಹೋಗುವ ತಮ್ಮ ಸಹೋದ್ಯೋಗಿಗಳಿಗೆ ರಾಜಧಾನಿಯ ಅನೇಕ ಮುಖ್ಯ ಸಂಸ್ಥೆಗಳಿಗೆ ಭೇಟಿಕೊಡಲು ಹೇಳಿ. ವಿದೇಶಗಳಿಗೆ ಹೋಗಬಯಸುವ ಮಂತ್ರಿಗಳು ಒಮ್ಮೆ ಬಿಹಾರಕ್ಕೂ ಹೋಗಿ ಬರಲಿ.
೩.ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಘನತೆ ಹೆಚ್ಚಿಸಲು ದೆಹಲಿಯಲ್ಲಿ  ಸ್ವತಂತ್ರವಾಗಿ  ಕರ್ನಾಟಕ ಅಧ್ಯಯನ ಕೇಂದ್ರವೊಂದನ್ನು ತೆರೆದು, ಆ ಮೂಲಕ ರಾಷ್ಟ್ರದ ಇತರ ರಾಜ್ಯಗಳೊಡನೆ ಒಂದು ಬಗೆಯ ಬೌದ್ಧಿಕ ಅನುಸಂಧಾನ ಏರ್ಪಡುವಂತೆ ಮಾಡುವುದು.

೪.ಕನ್ನಡಕ್ಕೆ ಇದೀಗ ಶಾಸ್ತ್ರೀಯ ಭಾಷೆಯ ಮನ್ನಣೆ ದೊರೆತಿದೆ. ಇದೇ ಕಾರಣ ನೀಡಿ, ಉತ್ತರ ಭಾರತದ ಕೆಲವು ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ  ಕನ್ನಡ ಅಧ್ಯಯನ ಕೇಂದ್ರ  ತೆರೆದು ಅಲ್ಲಿ ಕನ್ನಡದ ಬಗೆಗೆ ತಿಳುವಳಿಕೆ ಮೂಡಿಸುವ, ಕೆಲಸ ಮಾಡಿಸುವುದು.
ಮುಖ್ಯವಾಗಿ ದೆಹಲಿಯ ಪ್ರತಿಷ್ಠಿತ ಜವಾಹರಲಾಲ ನೆಹರೂ ವಿಶ್ವವಿದ್ಯಾಲಯದಲ್ಲಿ  ಕನ್ನಡ ವಿಭಾಗವೊಂದು ಆರಂಭವಾಗಬೇಕು. 
೫.ಇವತ್ತು ಭಾರತೀಯ ಭಾಷೆಗಳನ್ನು ಕಲಿಯಲು ವಿದೇಶಗಳಿಂದ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಆದರೆ ಕನ್ನಡ ಕಲಿಯಲು ಯಾರೂ ಬರುತ್ತಿಲ್ಲ. ಈ ವಿಷಯದಲ್ಲಿ  ತಮಗೆಲ್ಲ ಮಾದರಿಯಾಗಿರುವ ಗುಜರಾತ್ ಸೇರಿದಂತೆ ಬೇರೆ ರಾಜ್ಯಗಳು ಬಹಳ ಮುಂದಕ್ಕೆ ಸಾಗಿದರೆ ನಾವಿನ್ನೂ ಆರಂಭವನ್ನೇ ಮಾಡಿಲ್ಲ.

೬.ಕುಸಿಯುತ್ತಿರುವ ಕರ್ನಾಟಕದ ವಿಶ್ವವಿದ್ಯಾಲಯಗಳ ಗುಣಮಟ್ಟವನ್ನು ಎತ್ತರಿಸಬೇಕು.
೭.ರಾಜ್ಯ ಸರ್ಕಾರವು ವಿದೇಶೀ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಕಲಿಯಲು ಕೆಲವು ಶಿಷ್ಯ ವೇತನಗಳನ್ನು ನೀಡಬೇಕು.
ಪುರುಷೋತ್ತಮ ಬಿಳಿಮಲೆ
ನವದೆಹಲಿ

Thursday, August 2, 2012

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಂಗಳೂರಿನ ಪ್ರಸಿದ್ಧಿಗೆ ಇನ್ನಿಲ್ಲದ ಧಕ್ಕೆ


ತುಳುನಾಡಿನಿಂದ ಕಾರಣಾಂತರಗಳಿಂದ ಹೊರಗೆ ಹೋಗಿ ಬದುಕು ಮಾಡುತ್ತಿರುವ ಜನರು ದೊಡ್ಡ ಸಂಖ್ಯೆಯಲ್ಲಿ ಇಂದು ಜಗತ್ತಿನಾದ್ಯಂತ ಕಾಣಸಿಗುತ್ತಾರೆ. ಅದು ಹೋಟೆಲ್ ಉದ್ಯಮವೇ ಇರಬಹುದು ಅಥವಾ ಇನ್ನೇನೋ ಇರಬಹುದು. ಒಮ್ಮೆ ನಾನು ಇಸ್ರೇಲ್ ನ ಹೀಬ್ರೂ ವಿಶ್ವವಿದ್ಯಾಲಯಕ್ಕೆ ಹೋಗುವ ಹಾದಿಯಲ್ಲಿ  ಜೋರ್ಡಾನ್ ನ  ಇತಿಹಾಸ ಪ್ರಸಿದ್ಧ ಅಮಾನ್ ನಗರದಲ್ಲಿ ಒಂದು ದಿನ ಉಳಕೊಳ್ಳಬೇಕಾಯಿತು. ಕಾರಣ ಅಲ್ಲಿನ ರೋಮನ್ ಆಂಫಿ ಥಿಯೇಟರ್ ಮತ್ತು ಜಗತ್ಪ್ರಸಿದ್ಧ ಪೆಟ್ರಾ ವನ್ನು ನೋಡಲು ನಿರ್ಧರಿಸಿದೆ. ನಾನು ಉಳಕೊಂಡಿದ್ದ ಹೋಟೆಲ್ ನಿಂದ ಟ್ಯಾಕ್ಸಿಯೊಂದನ್ನು ಬುಕ್ ಮಾಡಿದೆ. ನಿಗದಿತ ಸಮಯಕ್ಕೆ ಟ್ಯಾಕ್ಸಿ ಬಂತು. ನಗರ ನೋಡಲು ಅನುಕೂಲ ಅಂತ ಕಾರಿನ ಇದಿರು ಸೀಟಲ್ಲಿ ಕುಳಿತೆ. ಒಂದೆರಡು ನಿಮಿಷದಲ್ಲಿಯೇ ಟ್ಯಾಕ್ಸಿ ಚಾಲಕ ಸಂಕೋಚದಿಂದ ಆಂಗ್ಲ ಭಾಷೆಯಲ್ಲಿ ಕೇಳಿದ- ನೀವು ಕರ್ನಾಟಕದವರೇ ?’. ನಾನು ಅವಕ್ಕಾಗಿ ಹೌದು ಎಂದೆ.  ಆತ ಮತ್ತೆ ಕೇಳಿದ-ಕರ್ನಾಟಕದಲ್ಲಿ ಎಲ್ಲಿ ? ನಾನು ದಕ್ಷಿಣ ಕನ್ನಡ ಜಿಲ್ಲೆ ಎಂದೆ. ಆತ ಮತ್ತೆ ಕೇಳಿದ ದಕ್ಷಿಣ ಕನ್ನಡದಲ್ಲಿ ಎಲ್ಲಿ? ನಾನು ಸುಬ್ರಹ್ಮಣ್ಯ ಎಂದೆ. ಕುತೂಹಲ ತಡೆಯಲಾರದೆ ನಾನೂ ಕೇಳಿದೆ- ನೀವು ಎಲ್ಲಿ ? ಆತ ತುಳುವಿನಲ್ಲಿ ಹೇಳತೊಡಗಿದ- - ನನ್ನ ಊರು ಮೂಡಬಿದಿರೆ, ಹೆಸರು ವೆಂಕಪ್ಪ, ಇಲ್ಲಿ ವೆಂಕಿ ಅಂತ ಕರೆಯುತ್ತಾರೆ, ಕಳೆದ ಆರು ವರ್ಷ ಗಳಿಂದ ಇಲ್ಲಿದ್ದೇನೆ, ನಿಮ್ಮ ಕೈಯಲ್ಲಿದ್ದ ಕನ್ನಡ ಪುಸ್ತಕ ನೋಡಿ,  ಕರ್ನಾಟಕದವರಿರಬೇಕು ಅಂದುಕೊಂಡೆ’  ವೆಂಕಿಯ ಸಹಾಯದಿಂದ ಅಮಾನ್ ನಗರದ ನನ್ನ ಪ್ರವಾಸ ಎಂದೂ ಮರೆಯದಾದಂತಾಯಿತು. 
ಮೊನ್ನೆ ಮಂಗಳೂರಲ್ಲಿ ಪುಂಡರು ಹೆಣ್ಣು ಮಕ್ಕಳ ಮೇಲೆ ಕೈ ಮಾಡಿದ ಮರುದಿನ ಬೆಳಿಗ್ಗೆ ವೆಂಕಿ ಅಮಾನ್ ನಿಂದ ದೂರವಾಣಿಯಲ್ಲಿ ಮಾತಾಡಿದ್ದರು. ’ಇಲ್ಲಿ ಅದು ದೊಡ್ಡ ಸುದ್ದಿ, ನಮಗೆಲ್ಲ ನಾಚಿಕೆಯಾಗುತ್ತಿದೆ. ನಮ್ಮ ಊರು ಯಾಕೆ ಹೀಗಾಗುತ್ತಿದೆ?, ಊರಿಗೆ ಹೋಗಲು ಮನಸ್ಸಾಗುತ್ತಿಲ್ಲ,  ಈ ಜೋರ್ಡಾನ್ ಹೇಳಿ ಕೇಳಿ ಮುಸ್ಲಿಂ ದೇಶ, ಆದರೆ ಇಲ್ಲಿ ಇಂಥ ಘಟನೆಗಳು ಯಾವತ್ತೂ ನಡೆದಿಲ್ಲ’ ಅಂತ ತಮ್ಮ ಅಳಲು ತೋಡಿಕೊಂಡರು. ನಾನೂ ಅಂದೆ- ಕರ್ನಾಟಕದಲ್ಲಿ ಬಿ ಜೆ ಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ನಾನು ಕೂಡಾ ಕರ್ನಾಟಕದವನು ಅಂತ ಯಾರಿಗೂ ಹೇಳುವುದಿಲ್ಲ. 
ಇದು ತುಳುನಾಡಿನಿಂದ ಹೊರಗೆ ಹೋಗಿ ಮರ್ಯಾದೆಯಿಂದ ಜಗತ್ತಿನಾದ್ಯಂತ ಕೆಲಸ ಮಾಡುತ್ತಿರುವವರಿಗೆ ಹಿಂದೂ ಜಾಗರಣ ವೇದಿಕೆಯವರು ನೀಡಿದ ಕೊಡುಗೆ. ಪಬ್ ಧಾಳಿಯ ನೋವು ಮುಗಿಯುವ ಮುನ್ನವೇ ಹೀಗಾಗಿದ್ದು, ನಾವೆಲ್ಲ ನಮ್ಮ ಹುಟ್ಟಿದೂರಿನ ಬಗ್ಗೆ ಹೇಸಿಕೆ ಪಟ್ಟುಕೊಳ್ಳುವಂತೆ ಮಾಡಿದೆ. ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಹಿಂದಿ ಪ್ರಾಧ್ಯಾಪಕರಾಗಿರುವ ಗೆಳೆಯ ಡಾ. ರಾಕೇಶ್ ರಂಜನ್ ಇ-ಮೇಲ್ ಕಳಿಸಿದ್ದರು - ಅಮೇರಿಕಾದಲ್ಲಿ ಇದು ಸುದ್ಧಿಯಾಗಿದೆ, ನೀನೂ ತುಳುವ ಅಲ್ಲವೇ ? ಪ್ರತಿಭಟಿಸಿ ಒಂದು ಪತ್ರವನ್ನಾದರೂ ಬರೆ?’ ನಾನವರಿಗೆ ಬರೆದೆ- ಗೆಳೆಯಾ ಯಾರಿಗೋಸ್ಕರ ಬರೆಯುವುದು? ನಿನ್ನಂತವರಿಗೆ ನಾನು ಏನು ಬರೆಯುತ್ತೇನೆ ಅಂತ ಚೆನ್ನಾಗಿ ಗೊತ್ತು, ನಾವು ಬರೆದರೆ  ಓದುವವರು ನಮ್ಮ ಗೆಳೆಯರು. ಅವರೆಲ್ಲ ನಮ್ಮ ಹಾಗೇ ಯೋಚಿಸುವವರಾದ್ದರಿಂದ ಅವರಿಗೆ ಬರೆಹದ ಅಗತ್ಯವಿಲ್ಲ. ಹಿಂದೂ ಜಾಗರಣ ವೇದಿಕೆಯವರು ನಮ್ಮಂತಹವರು ಬರೆದದ್ದನ್ನು ಓದುವುದಿಲ್ಲ, ಓದಿದ್ದರೆ ಹೀಗೆ ಮಾಡುತ್ತಿರಲಿಲ್ಲ, ಪಬ್ ಮೇಲೆ ಧಾಳಿ ನಡೆದಾಗ ’ ಕಡಲ ತಡಿಯ ತಲ್ಲಣ ( ಉಷಾ ಕಟ್ಟೆಮನೆ ಜೊತೆ ಸೇರಿ) ಪುಸ್ತಕ ತಂದೆವು? ಏನು ಪ್ರಯೋಜನವಾಯಿತು? ಬರವಣಿಗೆಯ ಮೇಲೆ ವಿಶ್ವಾಸ ಕಡಿಮೆಯಾಗುತ್ತಿದೆ, ಬಂದೂಕು ಬೇಕೆನಿಸುತ್ತದೆ. 
ಹೀಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಂಗಳೂರಿನ ಪ್ರಸಿದ್ಧಿಗೆ ಇನ್ನಿಲ್ಲದ ಧಕ್ಕೆಯಾಗಿದೆ. ನಾವೆಲ್ಲ ನಮಗೆ ಸಿಕ್ಕಿದ ವೇದಿಕೆಗಳಲ್ಲಿ ತುಳುನಾಡಿನ ಬಗೆಗೆ ಯಾವಾಗಲೂ ಬಹಳ ಅಭಿಮಾನದಿಂದ ಮಾತಾಡುತ್ತೇವೆ. ಕಾರ್ನಾಡ್ ಸದಾಶಿವ ರಾವ್, ಕುದ್ಮಲ್ ರಂಗರಾವ್, ಕಮಲಾದೇವಿ ಚಟ್ಟೋಪಾಧ್ಯಾಯ, ಉಳ್ಳಾಲ ಶ್ರೀನಿವಾಸ ಮಲ್ಯ, ಡಾ. ಶಿವರಾಮ ಕಾರಂತ, ಯಕ್ಷಗಾನ, ಭೂತಾರಾಧನೆ ಮತ್ತಿತರ ವ್ಯಕ್ತಿ ಮತ್ತು ವಿಷಯಗಳ ಬಗೆಗೆ ಮಾತಾಡುವುದೆಂದರೆ ನಮಗೆಲ್ಲ ಇನ್ನಿಲ್ಲದ ಸಂತೋಷ. ಒಂದು ಸಣ್ಣ ಊರಿನ ಅಸಾಮಾನ್ಯ ಸಾಧನೆಗಳ ಬಗ್ಗೆ ಮಾತಾಡುವಾಗ ಜನರೂ ಕುತೂಹಲದಿಂದ ಕೇಳುತ್ತಿದ್ದರು. ಆದರೆ ಈಗ ನಮ್ಮ ಬಾಯಿ ಕಟ್ಟಿದೆ. 
ಹೀಗೆ ಮಾಡುವುದರಿಂದ ಹಿಂದೂ ಜಾಗರಣ ವೇದಿಕೆಯರಿಗೆ ಆದ ಲಾಭವಾದರೂ ಏನು ಅಂತ ಅವರ ಪರವಾಗಿಯೂ ಯೋಚಿಸತೊಡಗಿದರೆ ಅದಕ್ಕೂ ಉತ್ತರ ದೊರೆಯುವುದಿಲ್ಲ. ತಾವು ದರೋಡೆ ಮಾಡಿ ತಂದ ಹುಡುಗರ ಮೊಬ್ಯಾಲ್, ಚಿನ್ನದ ಸರ ಇವರಿಗೆ ಎಷ್ಟು ದಿನ ಸಾಕಾದೀತು? ಇವರು ಮಾಡುವ ಆಕ್ರಮಣಗಳು ಬದಲಾಗುತ್ತಿರುವ ಸಮಾಜವನ್ನು ಮತ್ತೆ ಹಿಂದಕ್ಕೆ ಎಂದೆಂದೂ ಕೊಂಡೊಯ್ಯಲಾರವು.  ಸ್ವತಹ ವ್ಯಭಿಚಾರಿಗಳೂ, ಕೊಲೆಗಡುಕರೂ, ದರೋಡೆಕಾರರೂ ಆಗಿರುವ ಈ ಮಂದಿಗಳಿಗೆ ಸಮಾಜವನ್ನು ತಮಗೆ ಬೇಕಾದಂತೆ ಬದಲಾಯಿಸುವ ಶಕ್ತಿ ಎಂದೂ ಬಾರದು. ಭಾರತೀಯ ಸಮಾಜ ಇಂಥ ನೀಚರನ್ನು ತಿರಸ್ಕರಿಸಿ ಶತಮಾನಗಳಿಂದ ಬೆಳೆದು ಬಂದಿದೆ, ಮುಂದೆಯೂ ಬೆಳೆಯಲಿದೆ. 
ಮೊನ್ನೆ ಮಂಗಳೂರು ಘಟನೆಯಾದ ಆನಂತರ ದೆಹಲಿಯಲ್ಲಿರುವ ತುಳುವರೆಲ್ಲ ಒಂದೆಡೆ ಸೇರಿ ಒಂದು ಮನವಿ ಪತ್ರ ಸಿದ್ಧಪಡಿಸಿ ’ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಒದಗಿಸಿಕೊಡಲು ಒತ್ತಾಯಿಸುತ್ತೇವೆ’ ಅಂತ ಸಹಿ ಹಾಕಿದೆವು. ಆದರೆ ಈ ಪತ್ರವನ್ನು ಯಾರಿಗೆ ಕಳಿಸುವುದು ಅಂತ ಗೊತ್ತಾಗಲಿಲ್ಲ. ಮಂಗಳೂರಿನ ಆಯಕಟ್ಟಿನ ಜಾಗಗಳಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳ ಮತ್ತು ರಾಜಕಾರಣಿಗಳ ಚರಿತ್ರೆ ನಮಗೆಲ್ಲ ಚೆನ್ನಾಗಿ ಗೊತ್ತಿದೆ. ಅವರಿಗೆ ದೂರು ಕೊಡುವುದೆಂದರೆ ಕಳ್ಳನ ಕೈಗೆ ಬೀಗದ ಕೈ ಕೊಟ್ಟಂತೆ. ಮತ್ತೆ ಸರಕಾರಕ್ಕೆ ದೂರು ಕೊಡೋಣವೇ? ಕರ್ನಾಟಕದ ಈಗಿನ ಸರಕಾರ ಹುಟ್ಟಿದ್ದೇ ರೆಸಾರ್ಟಲ್ಲಿ. ಉತ್ತರ ಕರ್ನಾಟಕ ಪ್ರವಾಹದ ಧಾಳಿಗೆ ಸಿಕ್ಕಾಗ ಇವರಲ್ಲ ಹೈದಾರಾಬಾದಿನ ರೆಸಾರ್ಟಲ್ಲಿ ಕುಳಿತು ರೈತರ ಸಮಸ್ಯೆ ಕುರಿತು ಅಧ್ಯಯನ ಮಾಡುತ್ತಿದ್ದರು ಮತ್ತು ಹಾಗಂತ ಒಬ್ಬ ಮಂತ್ರಿ ಬಹಿರಂಗ ಹೇಳಿಕೆ ಕೊಡುತ್ತಿದ್ದ. ಇವರದೇ ಸರಕಾರದ ಮುಖ್ಯಮಂತ್ರಿಗಳು ಬಜೆಟ್ ಮಂಡನೆ ಮಾಡುವಾಗಲೂ ಹೆಚ್ಚಿನವರು ಇದ್ದದ್ದು ರೆಸಾರ್ಟಲ್ಲಿ. ’ ಇಲ್ಲಿ ಒಳ್ಳೆಯದಾಗುತ್ತಿದೆ, ಜನರ ಕಿರಿ ಕಿರಿ ಇಲ್ಲ ’ ಅಂತ ಮತ್ತೊಬ್ಬ ಮಂತ್ರಿ ಮಹಾಶಯ ಹೇಳಿಯೂ ಬಿಟ್ಟ.  
ಇಂಥ ಭಂಡ ಸರಕಾರಕ್ಕೆ ದೂರು ಕೊಡುವುದಾದರೂ ಹೇಗೆ? ಅಂತ ಯೋಚಿಸಿ ಮನವಿಯನ್ನು ಹಾಗೆಯೇ ತೆಗೆದಿರಿಸಿದೆವು.  
ಪುರುಷೋತ್ತಮ ಬಿಳಿಮಲೆ
ನವದೆಹಲಿ