Tuesday, November 6, 2012

ವೈ.ಅವನೀಂದ್ರನಾಥ್ ರಾವ್ ಅವರಿಗೆ ಡಾಕ್ಟರೇಟ್ ಪದವಿ

 
ನವದೆಹಲಿಯ ಕೇಂದ್ರ ಸಚಿವಾಲಯ ಗ್ರಂಥಾಲಯದ ಅಧಿಕಾರಿ ವೈ.ಅವನೀಂದ್ರನಾಥ್ ರಾವ್ ಅವರಿಗೆ ಮಧ್ಯ ಪ್ರದೇಶದ ಮಹಾತ್ಮಾ ಗಾಂಧಿ ಚಿತ್ರಕೂಟ ಗ್ರಾಮೋದಯ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದೆ.
ಡಾ. ವೈ.ಅವನೀಂದ್ರನಾಥ್ ರಾವ್
ಅವನೀಂದ್ರನಾಥ್ ಅವರು ಮಂಡಿಸಿದ "ಭಾರತದ ಸಚಿವಾಲಯ ಗ್ರಂಥಾಲಯಗಳ ಜಾಲ ಮತ್ತು ಸಂಪನ್ಮೂಲ ವಿನಿಮಯಗಳಿಗೆ ಒಂದು ಮಾದರಿ"ಎಂಬ ಮಹಾ ಪ್ರಬಂಧಕ್ಕೆ ಈ ಗೌರವ ಲಭಿಸಿದೆ.
ಡಾ.ಆರ್ .ಪಿ .ವಾಜಪೇಯಿ ಅವರು ಸಂಶೋಧನೆಗೆ ಮಾರ್ಗದರ್ಶಕರಾಗಿದ್ದರು.
ಅವನೀಂದ್ರನಾಥ್ ಅವರುಈ ಹಿಂದೆ ಮುಲ್ಕಿಯ ವಿಜಯ ಕಾಲೇಜು, ಮಂಗಳೂರಿನ ಬದ್ರಿಯಾ ಕಾಲೇಜು ಹಾಗೂ ಮೂಡಬಿದರೆಯ ಎಸ್.ಎನ್.ಎಂ.ತಾಂತ್ರಿಕ ವಿದ್ಯಾ ಸಂಸ್ಥೆಗಳ ಮುಖ್ಯ ಗ್ರಂಥಪಾಲಕರಾಗಿ ಹಾಗೂ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು.
ಮಂಗಳೂರು ಆಕಾಶವಾಣಿಯಲ್ಲಿ ತಾತ್ಕಾಲಿಕ ನೆಲೆಯ ನಿರೂಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಕವಿ ಮತ್ತು ಲೇಖಕರಾಗಿರುವ ಅವರ 'ಸಮಯ ಸಂದರ್ಭ'ಪ್ರಬಂಧ ಸಂಕಲನ ಹಾಗೂ ಎರಡು ಸಂಪಾದಿತ ಕೃತಿಗಳು ಪ್ರಕಟವಾಗಿದೆ.
ಮೂಲತ್ಹ ಉಡುಪಿ ಜಿಲ್ಲೆಯ ಎಲ್ಲೂರಿನ ಅವರಿಗೆ ಈಚೆಗೆ ಬಿ.ಎಂ.ಶ್ರೀ ಪ್ರತಿಷ್ಟಾನದ ಪುರಸ್ಕಾರವೂ ಲಭಿಸಿದೆ

No comments:

Post a Comment