ಡಾ. ಹೇಮಾ ಪಟ್ಟಣಶೆಟ್ಟಿ ಮತ್ತು ಸಿದ್ದಲಿಂಗ ಪಟ್ಟಣಶೆಟ್ಟಿ ಸಾಹಿತಿ ದಂಪತಿಗಳು ದೆಹಲಿ ಕರ್ನಾಟಕ ಸಂಘ ನಡೆಸಿದ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ತಮ್ಮ ಬದುಕು, ಸಾಹಿತ್ಯ, ಜೀವನ ಧೋರಣೆಗಳ ಕುರಿತು ಸಾಹಿತ್ಯಾಸಕ್ತರಲ್ಲಿ ಮಾತಾಡಿದರು. ಸಂಘದ ಸಾಹಿತ್ಯ ಉಪಸಮಿತಿಯ ಡಾ. ಪುರುಷೋತ್ತಮ ಬಿಳಿಮಲೆ ಮತ್ತು ರೇಣುಕಾ ನಿಡಗುಂದಿ ಅವರು ಈ ಕಾರ್ಯಕ್ರಮವನ್ನು ನಡೆಸಿ ಕೆಲ ಸಮಯ ದೆಹಲಿಯ ತಣ್ಣನೆಯ ಚಳಿಯಲ್ಲಿ ಸಾಹಿತಿಗಳಿಬ್ಬರ ಅನುಭವದ ರಸಾನುಭವ ದೊರೆಯುವಂತೆ ಮಾಡಿದರು.
ಎಲ್ಲಾ ಚಿತ್ರಗಳು ಬಾನಾಡಿ








No comments:
Post a Comment