Wednesday, April 25, 2012

Distinguished journalist, scholar Dharmaraja is no more


New Delhi, April 25 (ANI): In the passing away of Shri M. K. Dharmaraja, the country has lost a distinguished journalist and a Jain scholar who observed the principles of religion in letter and spirit.
M. K. Dharmaraja
I had the advantage of knowing him ever since I joined the Press Information Bureau in the middle fifties. Dharmaraja was a newsman in the All India Radio and one could see him with his colleagues from the Newsreel unit of the Radio reporting and recording events, from developments in the national scene to sports events.
He was almost two decades elder to me and bestowed me with affection. I came to know that he hailed from the Karkala Taluk of South Kanara. Dharmaraja went to St. Aloysius College in Mangalore and passed out with a Masters in Economics from Loyola College, Madras (now Chennai) in 1938. His classmates would have joined the Indian Civil Service those days, but Dharmaraja decided to join the All India Radio as a sub-editor. It never occured to him to change his profession.
He was present in the Parliament of India during crucial debates, at conferences in the capital every day, and watching events and reporting them. He took special interest in sports and prepared special programmes for the All India Radio. I spent hours with him during events like the National Games in the fifties and later at the Asiad in Delhi in 1982.
Dharmaraja was fluent in English and did commentaries for Test Cricket in the early years.
During the India-Pakistan War of 1971, Dharmaraja used to help me in projecting the events through the All India Radio (Newsreel). He was present in Parliament when Indira Gandhi made the crucial speech of announcing the surrender of Pakistani forces at Dacca in December 1971. Soon afterwards, he was recording an interview with the Army Chief, General Sam Manekshaw. I also remember Dharmaraja interviewing General Sam Manekshaw, when he was conferred with the rank of Field Marshal in 1973.
When I took over as head of the News Services Division of All India Radio, Dharmaraja was a valued colleague. We were witness to events that followed Operation Blue Star in Amritsar , the assassination of Indira Gandhi and the elections that followed.
Dharmaraja was a good host too. I remember the hospitality that I enjoyed at his residence and the warmth that my wife and me received from Laxmimathi, his wife. A devout Jain, Dharmaraja would finish his meals before sunset. 
His close-knit family includes his son Dr C.K. Ballal, a medical specialist at Mangalore, Raja Ballal, a lawyer in Delhi , Col (Retd) S. K. Ballal who served in the Garhwal Rifles, and a daughter Dr Srimanjari a Professor in Miranda House, Delhi University.
A founder member of the South Kanara Club , presided over by Oscar Fernandes in the capital, he promoted art forms of the district like Yakshagana and Bayalata. We both had the privilege of being honoured for our contribution to the Tulu language at the Tulu Sammelana in Dharmastala in November 2009.
Honours and awards sat lightly on the shoulders of Dharmaraja. Only those close to him knew that he was honoured at the World Conference for Religions in the United Kingdom. He was a keen student of Jain philosophy, and was present at events like the Mastakabisheka of Bahubali at Sravanabelagola, Karkala, Dharmastala and the most recent event at Venoor near Karkala in February this year.
Among the books on sports and religious written by him are "India in World Sports", published by the Publications Division. I had the opportunity of meeting him last Saturday, when I told him that we would celebrate his 100th birthday, only six years away. That was not to be. 
I. Ramamohan Rao (ANI)

ಅಪೂರ್ವ ಸಂಜೆ


Saturday, April 14, 2012

ದ್ರಾವಿಡ್ ಗೆ ಎಸೆದ ಆರು ಚೆಂಡುಗಳು !



ಕ್ರಿಕೆಟ್ ಗೀಳು ನನ್ನನ್ನು ಶೈಕ್ಷಣಿಕ ಆಯ್ಕೆಯಲ್ಲಿ ಎಡವಿ ಬೀಳುವಂತೆ ಮಾಡಿತ್ತು. ಭಾಷೆ ಮತ್ತು ಸಾಮಾಜಿಕ ಅಧ್ಯಯನಗಳಲ್ಲಿ ಹೆಚ್ಚು ಅಂಕವಿದ್ದರೂ ವಾಣಿಜ್ಯ ವಿಷಯವನ್ನು ನೆಚ್ಚಿಕೊಂಡೆ.
Avanindranath Rao Y
ಕಲಾ ವಿಷಯವನ್ನು ಓದುಎಂಬ ಅಣ್ಣನ ಸಲಹೆಗೆ ಕಿವಿ ಕೊಡಲಿಲ್ಲ. ವಾಣಿಜ್ಯ ವಿಷಯ ಓದಿ ಬ್ಯಾಂಕ್ ಸೇರಿಕೊಂಡರೆ ಕ್ರಿಕೆಟ್ ರಂಗದಲ್ಲಿ ಹೆಚ್ಚಿನ ಸಾಧನೆ ಮಾಡಬಹುದು ಎಂಬ ಭ್ರಮೆ ಆವರಿಸಿಕೊಂಡಿತ್ತು. ರಾಜ್ಯ ಮತ್ತು ದೇಶವನ್ನು ಕ್ರಿಕೆಟ್ ನಲ್ಲಿ ಪ್ರತಿನಿಧಿಸುವ ಕನಸು ತುಂಬಿಕೊಂಡಿತ್ತು. 
      ಮುಲ್ಕಿಯ ವಿಜಯ ಕಾಲೇಜ್ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಮತ್ತು ಆರಂಭ ಆಟಗಾರನಾಗಿ ಆಡಿದೆ. ಮಂಗಳೂರು ವಿಶ್ವವಿದ್ಯಾಲಯ ಪ್ರತೀ ವರುಷ ಬಿ.ಸಿ.ಆಳ್ವ ಟ್ರೋಫಿ ಪಂದ್ಯ ಆಯೋಜಿಸುತ್ತಿತ್ತು.
ಬಿ.ಸಿ.ಆಳ್ವ ಎಂದೇ ಹೆಸರಾಗಿದ್ದ ದ.ಕ.ಜಿಲ್ಲೆಯ ಪುತ್ತೂರಿನ ಬೆಳ್ಳಿಪಾಡಿ ಚಂದ್ರಹಾಸ ಆಳ್ವ ೧೯೫೧-೫೨ರಲ್ಲಿ ಭಾರತದ ಪರ ಎರಡು ಅನಧಿಕೃತ ಟೆಸ್ಟ್ ಪಂದ್ಯ ಆಡಿದ್ದರು. ಅಕಾಲದಲ್ಲಿ ಕ್ಯಾನ್ಸೆರ್ ಗೆ ಬಲಿಯಾಗಿದ್ದರು.೧೯೯೧-೯೨ ರಲ್ಲಿ ನಾನು ಬಿ.ಸಿ.ಆಳ್ವ ಟ್ರೋಫಿ ಮೊದಲ ಪಂದ್ಯದಲ್ಲಿ ಎಂ.ಐ.ಟಿ ಮಣಿಪಾಲ ಎದುರು ಆರಂಭ ಆಟಗಾರನಾಗಿ ತೆರಳಿ ಶೂನ್ಯ ಸಂಪಾದನೆ ಮಾಡಿದೆ. ಎರಡನೆ ಪಂದ್ಯ ಉಡುಪಿಯ ಪೂರ್ಣಪ್ರಜ್ಞ ಕಾಲೇಜ್ ಎದುರು ಎರಡು ರನ್ ಹೊಡೆದು ಕಾಟ್ ಬಿಹೈಂಡ್ ಆದೆ. ಅಲ್ಲಿಗೆ ನನ್ನ ಕ್ರಿಕೆಟ್ ಕನಸು ಚೂರಾಗಿತ್ತು.
     ವಾಣಿಜ್ಯ ಪದವಿ ಗಳಿಸಿ ಬೆಂಗಳೂರು ಸೇರಿದೆ. ಖಾಸಗಿ ಕಂಪೆನಿಯಲ್ಲಿ ಆಗ ಲೆಕ್ಕ ಪತ್ರ ನೋಡಿಕೊಳ್ಳುವ ಕೆಲಸ. ಕ್ರಿಕೆಟ್ ಹುಚ್ಚು ಇನ್ನೂ ಬಿಟ್ಟಿರಲಿಲ್ಲ. ಅದು ೧೯೯೩-೯೪ ರಣಜಿ ಸೀಸನ್.ಬೆಂಗಳೂರಿನಲ್ಲಿ ಕರ್ನಾಟಕ ಮತ್ತು ಮುಂಬೈ ತಂಡಗಳ ನಡುವೆ ನಿರ್ಣಾಯಕ ಪಂದ್ಯ. ಮುಂಬೈ ತಂಡದಲ್ಲಿ ಅನುಭವಿ ಆಟಗಾರರು ಗೈರು ಹಾಜರಾಗಿದ್ದರು.
ಹೊಸ ಆಟಗಾರರನ್ನು ಹಾಕಿಕೊಂಡು ತಂಡವನ್ನು ನಡೆಸುವ ಜವಾಬ್ದಾರಿಯನ್ನು ರವಿ ಶಾಸ್ತ್ರಿಗೆ ನೀಡಿದ್ದರು. ನನ್ನ ದೂರದ ಸಂಬಂಧಿಯೂ ಆಗಿದ್ದ ರವಿಶಾಸ್ತ್ರಿಯನ್ನು ಹತ್ತಿರದಿಂದ ಒಮ್ಮೆ ನೋಡುವ ಹಂಬಲ ಬಲವಾಗಿತ್ತು.೧೯೯೨ರ ವಿಶ್ವಕಪ್ ನಲ್ಲಿ ಕಾಲು ನೋವಿನ ನಡುವೆ ಆಡಿ ನೀರಸ ಪ್ರದರ್ಶನ ನೀಡಿದ್ದ ಶಾಸ್ತ್ರಿ ಟೀಕೆಗೆ ಗುರಿಯಾಗಿದ್ದರು.ಅದಕ್ಕೂ ಸ್ವಲ್ಪ ಹಿಂದೆ ಆಸ್ಟ್ರೇಲಿಯಾ ಎದುರು ದ್ವಿಶತಕ ಹೊಡೆದಿದ್ದ ರವಿ ಶಾಸ್ತ್ರಿಯ ಅಂತಾರಾಷ್ಟ್ರೀಯ ಬದುಕು ಕೊನೆಗೊಂಡಿತ್ತು.
೩೦ರ ಹರೆಯದ ಶಾಸ್ತ್ರೀ ಅಷ್ಟರಲ್ಲಿ ೮೦ ಟೆಸ್ಟ್ ಆಡಿದ್ದರು!. 
    ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ  ದಿನ ಕರ್ನಾಟಕ ಎದುರು ಮುಂಬೈ ಗೆಲ್ಲಬೇಕಾದರೆ ೪೦೬ ರನ್ ಗುರಿ ತಲುಪಬೇಕು.
ಮುಂಬೈಯ ಆರು ಆಟಗಾರರನ್ನು ೧೭೪ ರನ್ನಿಗೆ ಪೆವಿಲಿಯನ್ ಗೆ ಅಟ್ಟಿದ ಕರ್ನಾಟಕದ ಆಟಗಾರರು ಮೇಲುಗೈ ಸಾಧಿಸಿದ್ದರು.  ಒತ್ತಡದ ಸನ್ನಿವೇಶದಲ್ಲಿ ನೆಲಕಚ್ಚಿ ಆಡಿದ ನಾಯಕ ರವಿ ಶಾಸ್ತ್ರಿ ೧೫೧ ರನ್
 ಹೊಡೆದು ಮುಂಬೈಯನ್ನು ಫೈನಲ್ ಗೆ ತಲುಪಿಸಿದರು. ಒಂಭತ್ತು ವರುಷದ ಬಳಿಕ ಮುಂಬೈಗೆ ಮತ್ತೆ ರಣಜಿ ಕಿರೀಟ ತೊಡಿಸಿದರು.
     ಸಂಜೆ ಪಂದ್ಯ ಮುಗಿದ ಬಳಿಕ ಪ್ರೇಕ್ಷಕರೆಲ್ಲ ಹೊರನಡೆಯುತ್ತಿದ್ದರು. ನಾನು ಮೆಲ್ಲನೆ ಮೈದಾನಕ್ಕೆ ಇಳಿದೆ. ಕರ್ನಾಟಕದ ಕೆಲವು ಆಟಗಾರರು ನಿಧಾನಕ್ಕೆ ಮೈದಾನದ ಇನ್ನೊಂದು ಮಗ್ಗುಲಿಗೆ ತಾಲೀಮಿಗೆ ತೆರಳುತಿದ್ದರು.ಅವರಲ್ಲಿ ಒಬ್ಬರಿಗೆ ನಾನು ವಿಶ್ ಮಾಡಿದೆ. ಅವರು ನಕ್ಕರು. ಮಾತಿಗೆ ತೊಡಗಿಕೊಂಡರು. ಅವರ ಹೆಸರು ಸುಜಿತ್ ಸೋಮಸುಂದರ್. ಆತ ವಾಚಾಳಿಯಂತೆ ಕಂಡಿತು. ಡೇವಿಡ್ ಜಾನ್ಸನ್ ಎಂಬ ವೇಗದ ಬೌಲರ್ ಜೊತೆಯಾದರು.
ನಾನು ಸ್ಪಿನ್ ಬೌಲಿಂಗ್ ಮಾಡುತ್ತಿದ್ದೆ. ಅಷ್ಟರಲ್ಲಿ ನೀಳಕಾಯದ ತರುಣ ಆಟಗಾರ ನಮ್ಮ ಬಳಿಗೆ ನಡೆದು ಬರುತ್ತಿದ್ದರು. ಅವರೇ ರಾಹುಲ್ ದ್ರಾವಿಡ್. ದ್ರಾವಿಡ್ ನನ್ನ ಬಳಿ ಚೆಂಡು ಇರುವುದನ್ನು ಗಮನಿಸಿ ತನ್ನತ್ತ ಬೌಲಿಂಗ್ ನಡೆಸುವಂತೆ ಸನ್ನೆ ಮಾಡಿದರು. ಅವರಿಗೆ ಅದೇ ಶೈಲಿಯಲ್ಲಿ ಎಸೆದೆ. ಐದನೇ ಚೆಂಡು ಬ್ಯಾಟಿಗೆ ಸಿಗದಾಗ ದ್ರಾವಿಡ್ ಬ್ಯಾಟ್ ಎತ್ತಿ ಇನ್ನೊಂದು ಕೈಯಲ್ಲಿ ತಟ್ಟಿ ಅಭಿನಂದನೆ ಹೇಳಿದರು.ಹೀಗೆ ಸುಮಾರು ಆರು ಚೆಂಡು ಎಸೆದೆ. ಅಷ್ಟರಲ್ಲಿ ಕೋಚ್ ಇರಬೇಕು. ಆಟಗಾರರನ್ನು ಇನ್ನೊಂದು ತಾಲೀಮಿಗೆ ತೊಡಗಿಸಿಕೊಳ್ಳಲು ತನ್ನ ಬಳಿಗೆ ಕರೆದರು. ಈಗ ನನ್ನ ಕೆಲಸ ಚೆಂಡು ಹೆಕ್ಕಿ ಕೊಡಲು ಸೀಮಿತಗೊಂಡಿತು.
ಮೊನ್ನೆ ದ್ರಾವಿಡ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದಾಗ  ಹಳೆಯ ನೆನಪುಗಳು ತೇಲಿ ಬಂತು. ಅದು ಹುಡುಗಾಟದ ದಿನಗಳು.
     ದಿನಗಳಲ್ಲಿ ಕರ್ನಾಟಕ ಪ್ರತಿಭಾನ್ವಿತ ಆಟಗಾರರನ್ನು ಹೊಂದಿತ್ತು. ಟೆಸ್ಟ್ ಇತಿಹಾಸದಲ್ಲಿ ದಾಖಲೆ ಬರೆದ ರಾಹುಲ್ ದ್ರಾವಿಡ್ ಗೆ ಆರಂಭದಲ್ಲಿ ಅವಕಾಶ ಸಿಕ್ಕಿದ್ದು ಏಕ ದಿನ ಪಂದ್ಯದಲ್ಲಿ. ಮೊದಲ ದಿನ ನಿರಾಶೆ ಕಾದಿತ್ತು. ನಂತರ ೧೯೯೬ರಲ್ಲಿ ಇಂಗ್ಲೆಂಡ್ ವಿರುದ್ಧದ ತನ್ನ ಮೊದಲ ಟೆಸ್ಟ್ ನಲ್ಲಿ ೯೫ ರನ್ ಗಳಿಸಿದ ದ್ರಾವಿಡ್ ಮತ್ತೆಂದೂ ಹಿಂತಿರುಗಿ ನೋಡಲಿಲ್ಲ. ಸುಜಿತ್ ಸೋಮಸುಂದರ್ ಹಾಗೂ ಡೇವಿಡ್ ಜಾನ್ಸನ್ ಕೂಡ ಒಂದೆರಡು ಪಂದ್ಯಗಳನ್ನು ಭಾರತಕ್ಕಾಗಿ ಆಡಿದ್ದರು.
ನನಗೆ ನೆನಪಿರುವಂತೆ ಒಂದು ಕ್ರಿಕೆಟ್ ಸರಣಿಯಲ್ಲಿ ಕರ್ನಾಟಕದ ಏಳು ಮಂದಿ ಆಟಗಾರರು ಭಾರತ ತಂಡದಲ್ಲಿ ಆಡಿದ್ದರು!.   ದಿಲೀಪ್ ವೆಂಗ್ಸರ್ಕರ್ ಮತ್ತು ಮೊಹಮದ್ ಅಜರುದ್ದಿನ್ ನಂತರ ಭಾರತದ ಕ್ರಿಕೆಟ್  ಬ್ಯಾಟಿಂಗ್ ವಿಭಾಗಕ್ಕೆ ಆಸರೆಯಾದವರು ದ್ರಾವಿಡ್.
 ಬಗೆಯ ಸ್ಥಿರ ಚಿತ್ತದ ಆಟಗಾರರು ಭಾರತಕ್ಕೆ ಇಂದು ಅವಶ್ಯ ಬೇಕು.
  ವಾಣಿಜ್ಯ ಪದವಿ ಪಡೆದು ನಾನು ರನ್ ಔಟ್ ಆಗಿದ್ದೆ. ನಂತರ ಸಾಹಿತ್ಯದಲ್ಲಿ ಎಂ.ಎ ಮತ್ತು ಗ್ರಂಥಾಲಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದು ನನ್ನ ದಾರಿ ಕಂಡುಕೊಂಡೆ. ಕ್ರಿಕೆಟ್ ನಲ್ಲಿ ಒಮ್ಮೆ 'ಶೂನ್ಯ'ಕ್ಕೆ ಔಟ್ ಆದರೆಮುಂದಿನ ಪಂದ್ಯದಲ್ಲಿ ಶತಕ ಹೊಡೆಯುವ ಅವಕಾಶವಿದೆ. ಕ್ರಿಕೆಟ್ ನನಗೆ ಇದನ್ನೇ ಕಲಿಸಿದೆ. 
 -ವೈ.ಅವನೀಂದ್ರನಾಥ್ ರಾವ್      

Thursday, April 5, 2012

ದೆಹಲಿಯಲ್ಲಿ ರಾಷ್ಟ್ರೀಯ ಕನ್ನಡ ಸಮ್ಮೇಳನ - ಎಪ್ರಿಲ್ ಏಳರಿಂದ

ದೆಹಲಿ ಕನ್ನಡಿಗ ಪತ್ರಿಕೆಯ ಆಶ್ರಯದಲ್ಲಿ ೨೯ನೇ ರಾಷ್ಟ್ರೀಯ ಕನ್ನಡ ಸಮ್ಮೇಳನ ದೆಹಲಿಯಲ್ಲಿ ಇದೇ ಎಪ್ರಿಲ್ 7 ರಂದು ಆರಂಭಗೊಳ್ಳಲಿದೆ.
ಸಮ್ಮೇಳನವನ್ನು ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ. ಗೀತಾ ಬಾಲಿ ಅವರು ಉದ್ಘಾಟಿಸಲಿದ್ದಾರೆ. 
ಅಧ್ಯಕ್ಷತೆ ಲಕ್ನೋದ ಅಂಬೇಡ್ಕರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ. ಹನುಮಯ್ಯ ವಹಿಸಲಿರುವರು.
ಸಮ್ಮೇಳನದ ಸ್ಥಳ: ನಾಡೋಜ ಜಿ. ನಾರಾಯಣ ವೇದಿಕೆ, ದೆಹಲಿ ಕರ್ನಾಟಕ ಸಂಘ ಸಭಾಂಗಣ
ರಾವ್ ತುಲಾರಾಂ ಮಾರ್ಗ, ಸೆಕ್ಟರ್ 12, ಆರ್.ಕೆ. ಪುರಂ, ನವದೆಹಲಿ
ಎಪ್ರಿಲ್ 7, 2012 ಶನಿವಾರ ಸಂಜೆ 4.00 ಗಂಟೆಗೆ ಉದ್ಘಾಟನಾ ಸಮಾರಂಭ
ಕರ್ನಾಟಕ ಪ್ರಗತಿ ಉತ್ಸವ, ಪುಸ್ತಕ ಕಲಾ ಪ್ರದರ್ಶನ, ಸಾಹಿತ್ಯೋತ್ಸವ, ಸಾಂಸ್ಕೃತಿಕೋತ್ಸವ, ಭಾಷಾ ಬಾಂಧವೋತ್ಸವ, ಸಂಗೀತೋತ್ಸವ, ಸಮಾಜ ಸೌಹಾರ್ದೋತ್ಸವ
ಪ್ರಶಸ್ತಿ ವಿತರಣೆ: ಟಿ.ಎ.ಪೈ ಸ್ಮಾರಕ ಶ್ರೇಷ್ಠ ಬ್ಯಾಂಕರ್ ಪ್ರಶಸ್ತಿ, ಶ್ರೇಷ್ಠ  ಹೊರನಾಡ ಕನ್ನಡಿಗ ಪ್ರಶಸ್ತಿ,  ಶ್ರೇಷ್ಠ ಸಾಮಾಜಿಕ ಕಾರ್ಯಕರ್ತ ಪ್ರಶಸ್ತಿ,  ಶ್ರೇಷ್ಠ  ದೆಹಲಿ ಕನ್ನಡಿಗ ಪ್ರಶಸ್ತಿ, 
ಮಹಿಳಾ ಉತ್ಸವ
ಸನ್ಮಾನ ಸಮಾರಂಭ
ಕರ್ನಾಟಕ ಸಾಂಸ್ಕೃತಿಕ ಕಲಾ ವೈಭವ

ಎಪ್ರಿಲ್ 8, 2012 ರವಿವಾರ ಬೆಳಿಗ್ಗೆ 9.30 ಗಂಟೆಗೆ
ದಿನವಿಡೀ ಕಾರ್ಯಕ್ರಮ
ವಿಚಾರ ಗೋಷ್ಟಿ: ನನ್ನ ಬದುಕಿನಲ್ಲಿ ಕನ್ನಡ ಸಂಸ್ಕೃತಿ
ಕವಿಗೋಷ್ಟಿ
ವಿಚಾರ ಗೋಷ್ಟಿ: ಕನ್ನಡಕ್ಕೆ ಜಿ. ನಾರಾಯಣ ಕೊಡುಗೆ
ವಿಚಾರ ಗೋಷ್ಟಿ: ಕನ್ನಡ ಬಹು ಭಾಷಾ ಬಾಂಧವ್ಯ
ವಿಚಾರ ಗೋಷ್ಟಿ: ಕನ್ನಡಿಗರ ಸರ್ವಾಂಗೀಣ ಪ್ರಗತಿ
ಬಾಲಗೋಷ್ಟಿ: ಭವಿಷ್ಯಕಾಲದಲ್ಲಿ ನಾನು

ಸನ್ಮಾನ ಸಮಾರಂಭ
ಕರ್ನಾಟಕ ಸಾಂಸ್ಕೃತಿಕ ಕಲಾ ವೈಭವ


ಸಮ್ಮೇಳನಕ್ಕೆ ಮರೆಯದೇ ಬನ್ನಿ
ಸಂಪರ್ಕ:
80 ಸಿ, ಮುನಿರ್ಕಾ, ನವದೆಹಲಿ - 110067
ದೂರವಾಣಿ: +91 9868611970
ಬಾ. ಸಾಮಗ - ಸಮ್ಮೇಳನ ಸಂಚಾಲಕ

Wednesday, April 4, 2012

PADMA AWARDS PRESENTED


The President, Smt. Pratibha Devisingh Patil, the Vice President, Shri Mohd. Hamid Ansari and the Prime Minister, Dr. Manmohan Singh with the Padma Awardees, at an Investiture Ceremony-II, at Rashtrapati Bhavan, in New Delhi on April 04, 2012.


The President, Smt. Pratibha Devisingh Patil presenting the Padma Bhushan Award to Dr. Patibandla Chandrasekhara, at an Investiture Ceremony-II, at Rashtrapati Bhavan, in New Delhi on April 04, 2012.



The President, Smt. Pratibha Devisingh Patil presenting the Padma Shri Award to Smt. R. Nagarathnamma, at an Investiture Ceremony-II, at Rashtrapati Bhavan, in New Delhi on April 04, 2012.