Wednesday, October 31, 2012

‘ಮಾರ್ವೆಲ್ಸ್ ಆಫ್ ಮೈಸುರ್ ಅಂಡ್ ಮೋರ್‘

‘ಮಾರ್ವೆಲ್ಸ್ ಆಫ್ ಮೈಸುರ್ ಅಂಡ್ ಮೋರ್‘- ಬಿಡುಗಡೆ
‘ಮಾರ್ವೆಲ್ಸ್ ಆಫ್ ಮೈಸುರ್ ಅಂಡ್ ಮೋರ್‘, ಮೈಸೂರಿನ ಬಗ್ಗೆ ಒಂದು ವಿಶೇಷವಾದ ಸಮಕಾಲಿನ ಪುಸ್ತಕವನ್ನು, ಮಾನ್ಯ ಪ್ರವಾಸೋದ್ಯಮ ಸಚಿವರಾದ ಶ್ರೀ ಆನಂದ್ ಸಿಂಗ್ ಅವರು ಬಿಡುಗಡೆ ಮಾಡಿದರು. ದಸರಾ ಸಮಾರಂಭದ ಸುಸಂದರ್ಭದಲ್ಲಿ ಬಿಡುಗಡೆಯಾದ ಈ ಪುಸ್ತಕ, ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಹಾಗು ಬೆಂಗಳೂರಿನಲ್ಲಿರುವ ಪ್ರಕಟಣೆ ಸಂಸ್ಥೆಯಾದ ರೇನ್‌ಟ್ರೀ ಮೀಡಿಯಾದ ಜಂಟಿ ಪ್ರಕಟಣೆಯಾಗಿದೆ.
ಪುಸ್ತಕವನ್ನು ಬಿಡುಗಡೆ ಮಾಡಿದ ಸಚಿವರು, “ ಮೈಸೂರು ಭಾರತದ ಅತ್ಯಂತ ಆಕರ್ಷಕ ಪ್ರವಾಸಿ ತಾಣಗಳಲ್ಲೊಂದಾಗಿದೆ. ಇಷ್ಟು ವರ್ಷಗಳ ಕಾಲವೂ ಈ ನಗರ ತನ್ನ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಿಕೊಂಡು ಬಂದಿದೆ ಹಾಗು ಇಂದಿಗೂ ಕನ್ನಡಿಗರ ಬದುಕನ್ನು ಸಂಪನ್ನಗೊಳಿಸುತ್ತಿದೆ. ಇಂತಹ ಒಂದು ಸಮಕಾಲಿನ ಪುಸ್ತಕ, ಇಲ್ಲಿರುವ ಹಾಗು ವಿಶ್ವದಾದ್ಯಂತವಿರುವ  ಓದುಗರಿಗಾಗಿ ನಿಖರವಾದ ಮಾಹಿತಿಯನ್ನು ಉತ್ತಮ ಛಾಯಾಚಿತ್ರಗಳೊಂದಿಗೆ ನೀಡುವ ಪ್ರಮುಖವಾದ ಉದ್ದೇಶವನ್ನು ಪೂರೈಸುತ್ತದೆ. ಈ ಪುಸ್ತಕವು ಒಂದು ಅಂತರರಾಷ್ಟ್ರೀಯ ಪ್ರಕಟಣೆಯಾಗಿದ್ದು, ಇದು ಎಲ್ಲರ ಪ್ರಶಂಸೆಗೂ ಪಾತ್ರವಾಗುತ್ತದೆ ಎಂಬ ಭರವಸೆ ನಮಗಿದೆ., ಎಂದು ಹೇಳಿದರು.
ಸಂಧ್ಯಾ ಮೆಂಡೋನ್ಜಾ ಹಾಗೂ ಅನಿತಾ ರಾವ್ ಕಾಶಿಯವರು ಬರೆದರುವ, ಆಶಾ ತಂಡಾನಿ ಮುಖ್ಯ ಛಾಯಾಗ್ರಾಹಕರಾಗಿರುವ, ‘ಮಾರ್ವೆಲ್ಸ್ ಆಫ್ ಮೈಸೂರ್ ಅಂಡ್ ಮೋರ್‘, ವಾಸವ್ತವಾದ,ಛಾಯಾಚಿತ್ರಗಳ ಒಂದು ಸಮಕಾಲಿನ ಪುಸ್ತಕ. ಈ ಪಾರಂಪರಿಕ ನಗರದ ಚಿತ್ತಾಕರ್ಷಕ ದೃಶ್ಯಗಳ ಹಾಗೂ ಮೋಹಕ ಸೊಬಗನ್ನು ಈ ಪುಸ್ತಕ ಸಂಭ್ರಮಿಸುತ್ತದೆ. ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಪುಸ್ತಕಕ್ಕೆ ಬೆಂಬಲ ನೀಡಿದೆ.
ಪುಸ್ತಕವನ್ನು ಪ್ರಕಟಿಸಿರುವ ರೇನ್ ಟ್ರೀ ಮಿಡೀಯಾದ ನಿರ್ವಾಹಕ ನಿರ್ದೇಶಕಿ ಹಾಗೂ ಮುಖ್ಯ ಸಂಪಾದಕಿ ಸಂಧ್ಯಾ ಮೆಂಡೋನ್ಜಾ, ಪುಸ್ತಕದ ಬಗ್ಗೆ ಹೀಗೆ ಹೇಳುತ್ತಾರೆ: ಮಾರ್ವೆಲ್ಸ್ ಆಫ್ ಮೈಸೂರ್ ಅಂಡ್ ಮೋರ್‘ ಮೈಸೂರಿನ ಬಗ್ಗೆ ಒಂದು ಸಮಕಾಲಿನ ಪುಸ್ತಕ. ಈ ಪಾರಂಪರಿಕ ನಗರದ ಬಗ್ಗೆ ಹಲವಾರು ಪುಸ್ತಕಗಳಿವೆ. ಆದರೆ ಈ ಪುಸ್ತಕಗಳು ಕೇವಲ ನಗರದ ಪರಂಪರೆ ಬಗ್ಗೆ ತಿಳಿಸುತ್ತವೆ ಅಥವಾ ಪ್ರವಾಸಿ ಮಾರ್ಗದರ್ಶಿಗಳಾಗಿವೆ. ಪುಸ್ತಕದ ಶೀರ್ಷಿಕೆ ಸೂಚಿಸುವಂತೆ ಈ ಪ್ರಕಟಣೆ ಇನ್ನೂ ಹೆಚ್ಚನ್ನು ನೀಡುತ್ತದೆ- ಇದು ಆಲ್-ಇನ್-ಒನ್ ಪುಸ್ತಕ-ಒಂದು ಛಾಯಾ ಪುಸ್ತಕ, ಒಂದು ಪ್ರವಾಸಿ ಮಾರ್ಗದರ್ಶಿ ಹಾಗೂಈ ಚಾರಿತ್ರಿಕ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಒಂದು ವೃತ್ತಾಂತ ಸಹ.
ಮೈಸೂರು ಹಾಗೂ ಅದರ ಸುತ್ತುಮುತ್ತಲಿನ ಪ್ರದೇಶಗಳು ಸ್ಥಳೀಯರಿಗೆ ಹಾಗೂ ಹೊರಗಿನವರಿಗೂ ಸಹ ಒಂದೇ ರೀತಿಯ ಖುಷಿಯನ್ನು ನೀಡುತ್ತವೆ. ಈ ಪುಸ್ತಕ ಈ ನಗರದ ಸಾಂಸ್ಕೃತಿಕ ಚರಿತ್ರೆ ಹಾಗೂ ಪ್ರಾಕೃತಿಕ ಸೊಬಗಿನ ಬಗ್ಗೆ ವಿವರಣಾತ್ಮಕ ಮಾಹಿತಿಯನ್ನು ಹೊಂದಿದೆ. ಈ ಪುಸ್ತಕವು ದಸರಾ ಮಹೋತ್ಸವ, ಚಿತ್ತಾಕರ್ಷಕವಾದ ಜಾನಪದ ನೃತ್ಯಗಳು, ಪಾರಂಪರಿಕ ಕಟ್ಟಡಗಳು, ಆಧುನಿಕ ಬೆಳವಣಿಗೆಗಳು ಹಾಗೂ ಕರ್ನಾಟಕದ ಈ ಭಾಗದ ಸಾಂಸ್ಕೃತಿಕ ವೈವಿಧ್ಯತೆಯನ್ನು ಒಳಗೊಂಡಿದೆ. ‘ಮಾರ್ವೆಲ್ಸ್ ಆಫ್ ಮೈಸೂರ್ ಅಂಡ್ ಮೋರ್‘, ಓದುಗರಿಗೆ ಈ ನಗರದಲ್ಲಿ ಏನು ನೋಡಬೇಕು, ಏನು ಕೊಳ್ಳಬೇಕು, ಎಲ್ಲಿ ಇರಬೇಕು ಎನ್ನುವುದರ ಮಾಹಿತಿ ನೀಡುವುದರ ಜೊತೆಗೆ ಬೆಂಗಳೂರಿನಿಂದ ಪ್ರಾರಂಭಿಸಿ, ಮೇಲುಕೋಟೆ, ರಂಗನತಿಟ್ಟು ಹಾಗೂ ಕೊಡಗಿನವರೆಗಿನ ಮರ್ಗದಲ್ಲಿ ನಡೆದು ಎಲ್ಲಾ ಸ್ಥಳಗಳ ಬಗ್ಗೆಯೂ ಸಹ ಮಾಹಿತಿಯನ್ನು ನೀಡುತ್ತದೆ.
‘ಮಾರ್ವೆಲ್ಸ್ ಆಫ್ ಮೈಸುರ್ ಅಂಡ್ ಮೋರ್‘ ಬಗ್ಗೆ ಪ್ರಶಂಸೆ
ಅದ್ಭುತವಾದ ಚಿತ್ರಗಳನ್ನು ಹೊಂದಿರುವ ಕಾಫಿ ಟೇಬಲ್ ಪುಸ್ತಕ ಹಾಗೂ ಮೈಸೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಬಗ್ಗೆ ಪ್ರವಾಸಿಗರಿಗೆ ಸಮರ್ಪಕವಾದ ಮಾರ್ಗದರ್ಶಿಯೂಯಾಗಿರುವ ಒಂದು ಪುಸ್ತಕ- ಶಶಿ ದೇಶಪಾಂಡೆ, ಲೇಖಕಿ
ಮೈಸೂರು ತನ್ನ ಸಮನ್ವಯದ ವೈಭವದಿಂದ ನಮ್ಮ ಪ್ರತಿಯೊಂದು ಇಂದ್ರೀಯವನ್ನು ರೋಮಾಂಚನಗೊಳಿಸುತ್ತದೆ. ಅಲ್ಲಿರುವ ಅರಮನೆಗಳು, ಕೆರೆಗಳು, ಉದ್ಯಾನವನಗಳು ಹಾಗು ಪಕ್ಷಿಧಾಮಗಳು ದಣಿದ ಕಣ್ಣುಗಳಿಗೆ ತಂಪೆರುಚುತ್ತವೆ. ದೇವಸ್ಥಾನಗಳ ಗಂಟೆಗಳ ನಾದದಿಂದ, ಕರ್ನಾಟಕ ಸಂಗೀತದ ಹಿತವಾದ ತರಂಗಗಳವರೆಗೂ, ಎಲ್ಲವೂ ನಮ್ಮನ್ನು ಕಾಲಮಾನದಲ್ಲಿ ಹಿಂದಕ್ಕೆ ಕರೆದುಕೊಂಡು ಹೋಗುತ್ತದೆ. ಹೂವು ಹಾಗೂ ಕಾಫಿ, ಶ್ರೀಗಂಧ ಹಾಗೂ ಗಂಧದ ಕಡ್ಡಿಗಳ ಮೂಲಕ, ಈ ನಗರ ಪುರಾತನ ಹಾಗೂ ಆಧುನಿಕ ಎರಡರ ಸುಗಂಧವನ್ನೂ ಬೀರುತ್ತದೆ. ಮೈಸೂರು ಪಾಕಿನಿಂದ ಹಿಡಿದು ಮಸಲಾ ದೋಸೆಯವರೆಗೆ ( ಅದರ ನಡೂವೆ ಬರುವ ಎಲ್ಲವೂ ಸೇರಿ) ಇವುಗಳ ರುಚಿ ಎಲ್ಲರ  ನಾಲಿಗೆಗಳನ್ನೂ ಗೆದ್ದಿದೆ. ವಾಯುವಿಹಾರಿಗಳ ಸ್ವರ್ಗ ಇದು- ತನ್ನ ಅರಸೊತ್ತಿಗೆಯ ಹಾಗು ವಸಾಹತಿತನದ ಗತಕಾಲವನ್ನು ಅನುಭವಿಸಲು, ಸ್ಪರ್ಶಿಸಲು ಇಲ್ಲಿ ನಿಮಗೆ ಸ್ವಾಗತವಿದೆ.  ಸಂಧ್ಯಾ ಮೆಂಡೋನ್ಜಾ ಹಾಗೂ ಅನಿತಾ ಕಾಶಿ, ಭಾರತದ ಅತ್ಯಂತ ಸುಂದರ ನಗರದ ಅಸಂಖ್ಯಾತ ಕೌತುಕಗಳನ್ನು ವೀಕ್ಷಿಸಲು ಹಾಗೂ ಅನುಭವಿಸಲು ಕಿಟಕಿಗಳನ್ನು ತೆಗೆದಿಟ್ಟಿದ್ದಾರೆ- ಕೃಷ್ಣಪ್ರಸಾದ್, ಎಡಿಟರ್-ಇನ್-ಚೀಫ್, ಔಟ್ ಲುಕ್
ಲೇಖಕರ ಬಗ್ಗೆ
ಸಂಧ್ಯಾ ಮೆಂಡೋನ್ಜಾ, ಒಬ್ಬ ಲೇಖಕಿ, ಪ್ರಕಾಶಕಿ ಹಾಗೂ ಅಂಕಣಕಾರರು. ಮಾಧ್ಯಮದ ಉದ್ಯಮಿದಾರರಾಗುವ     i iನ್ನ, ಅವರು ಪ್ರತಿಷ್ಟಿತ ದಿನಪತ್ರಿಕೆಗಳು ಹಾಗೂ ನಿಯತಕಾಲಿಕಗಳಲ್ಲಿ ಪತ್ರಿಕೋದ್ಯಮಿಯಾಗಿ ದುಡಿದಿದ್ದಾರೆ.
ಅನಿತಾ ರಾವ್ ಕಾಶಿ, ಪ್ರವಾಸ ಹಾಗು ಆಹಾರದ ಬಗ್ಗೆ ಬರಹಗಳನ್ನು ಬರೆಯುವ ಲೇಖಕಿ. ಇವರು ಸ್ವತಂತ್ರ ಲೇಖಕಿ ಯಾಗುವ ಮೊದಲು ಪತ್ರಿಕೆಯಲ್ಲಿ ವರದಿಗಾರರಾಗಿ ಕೆಲಸ ಮಾಡುತ್ತಿದ್ದರು. ಇವರು ದಿನಪತ್ರಿಕೆಗಳಿಗೆ ಹಾಗೂ ನಿಯತಕಾಲಿಕಗಳಿಗೆ ಲೇಖನಗಳನ್ನು ಬರೆಯುತ್ತಾರಲ್ಲದೆ, ಪ್ರವಾಸ ಹಾಗೂ ಆಹಾರದ ಬಗ್ಗೆ ಮಾಹಿತಿ ನೀಡುವ ಪುಸ್ತಕಗಳಿಗೂ ಬರೆಯುತ್ತಾರೆ.
ಮಾರ್ವೆಲ್ಸ್ ಆಫ್ ಮೈಸೂರ್ ಅಂಡ್ ಮೋರ್
ಸಂಧ್ಯಾ ಮೆಂಡೋನ್ಜಾ  ಹಾಗು ಅನಿತಾ ಕಾಶಿಯವರಿಂದ
ಪುಟಗಳು: 132
ಐಎಸ್‌ಬಿಎನ್: 978-81-906620-6-2
ಬೆಲೆ: ರೂ 750/-
ಎಲ್ಲಾ ಪ್ರಮುಖ ಪುಸ್ತಕ ಅಂಗಡಿಗಳಲ್ಲಿ ಹಾಗು https://www.facebook.com/raintreemedia  ನಲ್ಲೂ ಲಭ್ಯವಿದೆ
ಮಾಧ್ಯಮ ಸಂಪರ್ಕ:
ಹೇಮಾ ಭಾಸ್ಕರನ್: 91 9845562370
1112.hema@gmail.com

Tuesday, October 30, 2012

ನಾಟಕ "ಗಡಿಯಂಕ ಕುಡಿಮುದ್ದ" ಕೆಂಪುಕೋಟೆ ತಂಡದ ಪ್ರದರ್ಶನ

ಲಿಂಗದೇವರು ಹಳೆಮನೆ ಅವರು ಬರೆದಿರುವ ನಾಟಕ "ಗಡಿಯಂಕ ಕುಡಿಮುದ್ದ" ಕೆಂಪುಕೋಟೆ ತಂಡದ ಪ್ರದರ್ಶನ ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ಅಕ್ಟೋಬರ್ 28 ರ ಭಾನುವಾರ