- ರಾಷ್ಟ್ರೀಯ ನಾಟಕೋತ್ಸವಕ್ಕೆ ಕರ್ಣಭಾರ
- Udayavani | Dec 08, 2011
ಉಡುಪಿ : ದಿಲ್ಲಿಯ ರಾಷ್ಟ್ರೀಯ ನಾಟಕ ಶಾಲೆ ಆಯೋಜಿಸಿರುವ 14ನೇ 'ಭಾರತ್ ರಂಗ್ ಮಹೋತ್ಸವ್' ಕಾರ್ಯಕ್ರಮಕ್ಕೆ ಮಣಿಪಾಲದ ಸಂಗಮ ಕಲಾವಿದೆರ್ ಅವರ 'ಕರ್ಣಭಾರ' ನಾಟಕ ಆಯ್ಕೆಯಾಗಿದೆ.
2012ರ ಜ. 8ರಿಂದ 22ರ ವರೆಗೆ ದೇಶದ ವಿವಿಧ ಭಾಗಗಳ ತಂಡಗಳಿಂದ ನಾಟಕ ಪ್ರದರ್ಶನ ನಡೆಯಲಿದೆ. ಇದರಲ್ಲಿ ಭಾಸ ಮಹಾಕವಿಯ ಅಭಜಾತ ಕರ್ಣಭಾರ ನಾಟಕವು ಖ್ಯಾತ ನಿರ್ದೇಶಕ ಡಾ| ಶ್ರೀಪಾದ ಭಟ್ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ.
ಇದೇ ಪ್ರಥಮ ಬಾರಿಗೆ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ತುಳು ನಾಟಕ ಪ್ರದರ್ಶನ ಕಾಣಲಿದೆ. ಇದು ನಮ್ಮ ಸಂಸ್ಥೆಗೆ ಹೆಗ್ಗಳಿಕೆ. ರಂಗಭೂಮಿಯ ಪ್ರಯೋಗಶೀಲತೆಗೆ ನಾಂದಿ ಹಾಡಿದೆ ಎಂದು ಸಂಗಮ ಕಲಾವಿದೆರ್ ಸಂಘಟನೆಯ ಅಧ್ಯಕ್ಷ ನಿತ್ಯಾನಂದ ಶೆಟ್ಟಿಗಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ದೆಹಲಿಯಲ್ಲೊಂದು ಕೆಂಪುಕೋಟೆ. ಹೊರಗಿದ್ದವರಿಗೆ ಒಳ ಹೋಗಲು ತವಕ! ಒಳಗಿದ್ದವರಿಗೆ ಹೊರ ಬರುವ ತಲ್ಲಣ! ಈ ನಡುವೆ ಕೆಲವು ಬರಹಗಳು ಮತ್ತು ಚಿತ್ರಗಳು.
Friday, December 9, 2011
ರಾಷ್ಟ್ರೀಯ ನಾಟಕೋತ್ಸವಕ್ಕೆ ಕರ್ಣಭಾರ
Subscribe to:
Post Comments (Atom)
No comments:
Post a Comment