Wednesday, May 2, 2012

ವೈ. ಅವನೀಂದ್ರನಾಥ್ ರಾವ್ ಅವರಿಗೆ ಬಿ.ಎಂ. ಶ್ರೀ. ಪ್ರತಿಷ್ಠಾನದ ಪುರಸ್ಕಾರ


ಬೆಂಗಳೂರಿನ ಬಿ.ಎಂ.ಶ್ರೀ. ಪ್ರತಿಷ್ಠಾನವು ಹಿರಿಯ ಸಾಹಿತಿ ದಿ. ಸಮೇತನಹಳ್ಳಿ ರಾಮರಾಯ ಕೃತಿಗಳ ವಿಮರ್ಶೆಗೆ ನೀಡುವ ’ರಾಸ ಸಾಹಿತ್ಯ ದತ್ತಿ ನಿಧಿ ಬಹುಮಾನ’ ವನ್ನು ದೆಹಲಿಯ ಲೇಖಕ ವೈ. ಅವನೀಂದ್ರನಾಥ್ ರಾವ್ ಅವರಿಗೆ ನೀಡಿದೆ. ಅವನೀಂದ್ರನಾಥ್ ಬರೆದ ’ಸಮೇತನಹಳ್ಳಿಯವರ ’ಗಣೇಶ’ ನಾಟಕದಲ್ಲಿ ಭಾರತೀಯ ಸಂಸ್ಕೃತಿಯ ಅನಾವರಣ’ ಎಂಬ ವಿಮರ್ಶಾ ಪ್ರಬಂಧಕ್ಕೆ ಈ ಪುರಸ್ಕಾರ ಲಭಿಸಿದೆ. ಇದೇ  ಎಪ್ರಿಲ್ 18 ರಂದು ನಡೆದ ಸಮಾರಂಭದಲ್ಲಿ ಅವನೀಂದ್ರನಾಥ್ ಅವರು 2011ನೇ ಸಾಲಿನ ಪುರಸ್ಕಾರವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಹಾಗೂ ಪ್ರತಿಷ್ಠಾನದ ಗೌರವಾಧ್ಯಕ್ಷ ಪ್ರೊ. ಎಂ.ಎಚ್. ಕೃಷ್ಣಯ್ಯ ಅವರಿಂದ ಸ್ವೀಕರಿಸಿದರು.
ಪ್ರೊ. ಕೃಷ್ಣಯ್ಯ ಮಾತನಾಡಿ ’ಶಾಸನ ಪ್ರಿಯರಾಗಿದ್ದ ರಾಮರಾಯರ ಕೃತಿಗಳ ಅಧ್ಯಯನ ವಿಮರ್ಶಕರಿಗೆ ಒಂದು ಸವಾಲು’ ಎಂದು ತಿಳಿಸಿದರು.
ಆರಂಭದಲ್ಲಿ ಹಿರಿಯ ಕವಿ. ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ ಅವರಿಂದ ತೀ.ನಂ.ಶ್ರೀ. ದತ್ತಿ ಉಪನ್ಯಾಸ ನಡೆಯಿತು. ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಡಿ. ಲಿಂಗಯ್ಯ, ಕಾರ್ಯದರ್ಶಿ ಎಸ್.ವಿ. ಶ್ರೀನಿವಾಸ ರಾವ್ ಹಾಗೂ ಸಾಹಿತಿ ಡಿ.ಎಸ್. ನಾಗಭೂಷಣ ಉಪಸ್ಥಿತರಿದ್ದರು.

No comments:

Post a Comment