ಲಿಂಗದೇವರು ಹಳೇಮನೆ
ಮೈಸೂರಿನ ರಂಗಾಯಣದ ನಿರ್ದೇಶಕರಾಗಿದ್ದ ಲಿಂಗದೇವರು ಹಳೆಮನೆ ಭಾಷಾ ಶಾಸ್ತ್ರಜ್ಞ ಮತ್ತುಬರಹಗಾರರು.
ವಿಮರ್ಶಕ, ಸಂಶೋಧಕ, ನಾಟಕಕಾರರಾಗಿದ್ದ ಲಿಂಗದೇವರು ಹಳೇಮನೆ ಅವರು ಕೇಂದ್ರೀಯ ಭಾಷಾ ಸಂಸ್ಥಾನದಲ್ಲಿ ಮೂರು ದಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.
ವಚನ ಸಾಹಿತ್ಯದ ವಿಭಿನ್ನ ದೃಷ್ಟಿಕೋನ, ಕನ್ನಡ ನಾಟಕಗಳಲ್ಲಿ ಭಾಷೆ, ಭಾರತದಲ್ಲಿ ಸ್ತ್ರೀ ಸಾಕ್ಷರತೆ, ಉದ್ಯಮವಾಗಿ ರಂಗಭೂಮಿ ಇಂತಹ ವಿಚಾರಗಳಲ್ಲಿ ಅವರು ಪ್ರಬಂಧಗಳನ್ನು ಮಂಡಿಸಿದ್ದಾರೆ.
ನಾಟಕಕಾರರಾಗಿ ಹಳೆಮನೆಯವರು ಹೊರತಂದಿರುವ ಹಲವು ರಂಗಕೃತಿಗಳು ಕನ್ನಡ ರಂಗಭೂಮಿಯ ಆಸ್ತಿಯಾಗಿವೆ. ಹೈದರ್, ಚಿಕ್ಕದೇವ ಭೂಪ, ಧರ್ಮಪುರಿ ದೇವದಾಸ, ಬಿರುದಂತೆಂಬರ ಗಂಡ ಇವು ಹಳೆಮನೆಯವರ ಪ್ರಮುಖ ಕೃತಿಗಳು. ಬ್ರೆಕ್ಟ್‌ನ ಹಲವಾರು ನಾಟಕಗಳನ್ನು ಹಳೆಮನೆ ಕನ್ನಡಕ್ಕೆ ತಂದುಕೊಟ್ಟಿದ್ದಾರೆ.
ಅವುಗಳಲ್ಲಿ "ಮದರ್ ಕರೇಜ್’, "ಗುಂಡುತಲೆ ಚೂಪುತಲೆ’ ಮುಖ್ಯವಾದುವುಗಳು.
ಆಳವಾದ ಅಧ್ಯಯನದಿಂದ ಲಿಂಗದೇವರು ಹಳೆಮನೆ ರಂಗಭೂಮಿ ಜನತೆಯ ನೋವು ನಲಿವುಗಳಿಗೆ ಸ್ಪಂದಿಸುವ ವೇದಿಕೆಯಾಗಬೇಕು ಎಂದು ನಂಬಿದ್ದವರು.
ಜಾತ್ಯಾತೀತ ಮೌಲ್ಯಗಳು ಬಹು ಸಂಸ್ಕೃತಿ ದೇಶವಾದ ಭಾರತದ ಮುಖ್ಯವಾದ ಸಂಗತಿಗಳಾಗಬೇಕು ಎಂದಿದ್ದರವರು.
ಲಿಂಗದೇವರು ಹಳೆಮನೆ ಅವರು ಬರೆದಿರುವ ನಾಟಕ "ಗಡಿಯಂಕ ಕುಡಿಮುದ್ದ" ಕೆಂಪುಕೋಟೆ ತಂಡದ ಪ್ರದರ್ಶನ ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ಅಕ್ಟೋಬರ್ 28 ರ ಭಾನುವಾರ ಸಂಜೆ 6.00 ಗಂಟೆಗೆ.
ನಿಮಗೆಲ್ಲರಿಗೂ ಆತ್ಮೀಯ ಆಮಂತ್ರಣ.

No comments:
Post a Comment