Monday, November 7, 2011

ಮೆಸೇಜ್ ಬಂತು


ಕೆಂಪುಕೋಟೆ ತಂಡದಿಂದ "ಮೆಸೇಜ್ ಬಂತು" ನಾಟಕ ತಯಾರಾಗುತ್ತಿದೆ.
ಬಾಣಸಿಗ ಪ್ರಕಾಶ್ ಶೆಟ್ಟಿ ಉಡುಪಿಯಿಂದ ಅಡುಗೆಯವರನ್ನು ಕರೆತರುವವರಿದ್ದಾರೆ
ಅನಿತಾ ಹಪ್ಪಳ ಸುಡಲು ಸ್ಟವ್ ಹಚ್ಚುತ್ತಿದ್ದಾಳೆ
ಅವನೀಂದ್ರರು ಯಾವ ಹೊಸ ಮೊಬೈಲು ತೆಗೆದುಕೊಂಡರೆ ಒಳ್ಳೆಯದು ಎಂದು ಕೇಳುತ್ತಿದ್ದಾರೆ
ರಾಕೇಶ ಮಾತ್ರ ನಾಪತ್ತೆಯಾಗಿದ್ದಾನೆ, ದಿನಾ ಪ್ರಾಕ್ಟಿಸಿಗೂ ಬಾರದೇ ದಿಲ್ಲಿಯ ಹುಡುಗಿ ಜತೆ ಮಾಲ್ ತಿರುಗಾಡುತ್ತಿದ್ದಾನೆ
ಗುರುರಾಜ ಆಫೀಸಿಗೆ ರಜೆ ಹಾಕಿ ಡಯಲಾಗ್ ಓದುತ್ತಿದ್ದಾರೆ
ಸ್ವಾತಿ ಯಾವ ಸೀರೆ ಯಾವ ಜುಮ್ಕಿ ಹಾಕಿದರೆ ’ನಾಟಕ’ದವರ ಹಾಗೆ ಕಾಣಬಹುದು ಎಂದು ಕೇಳುತ್ತಿದ್ದಾಳೆ
ಸೌಜನ್ಯ ನನಗೆ ಇಷ್ಟು ಡಯಲಾಗ್ ಯಾಕೆ ಕೊಟ್ಟಿದ್ದೀರಿ ಎಂದು ಕಾಡಿಸುತ್ತಾಳೆ
ರಾಘವೇಂದ್ರ ನಿದ್ದೆಯಲ್ಲೂ ಮೆಸೇಜ್ ಬಂತಾ ಎಂದು ಕೇಳುತ್ತಿದ್ದಾನೆ
ಪ್ರದೀಪ ಸ್ಟೇಜ್‍ಗೆ ರಿಕ್ಷಾ ತರಲಿಕ್ಕೆ ಆಗ್ತದಾ ಅಂತ ಪ್ಲಾನ್ ಮಾಡ್ತಾನೆ
ಸಾಮ್ರಾಟ್ ಬ್ರೇಕ್, ರಾಕ್ ಡ್ಯಾನ್ಸ್ ಎಂದು ಕಾಲು ಸೊಂಟ ನೋವು ಮಾಡಿಸಿಕೊಂಡಿದ್ದಾನೆ
ಚಿನುಮಯ ಈ ನಾಟಕಕ್ಕಿಂತ ಪರೀಕ್ಷೆಗೆ ಓದುವುದೇ ಈಸಿ ಎನ್ನುತ್ತಾನೆ
ಸಚಿನ್ ಪ್ರಾಕ್ಟಿಸಿಗೆ ಕರೆದರೆ ಎಲ್ಲರಿಗಿಂತ ಮುಂಚೆ ನಾನೇ ಬರುವುದು ಹಾಗಾಗಿ ನಾನು ಮೊದಲು ಹೋಗ್ತೇನೆ ಅಂತ ಹೇಳ್ತಾನೆ
ಬಿಳಿಮಲೆಯವರು ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದ ಮೇಲೆ ನನಗೆ ಯಾವುದರಲ್ಲೂ ಆಸಕ್ತಿ ಇಲ್ಲ; ಈ ಹುಡುಗರ ಜತೆ ಸೇರಿ ಸುಮ್ಮನೆ ಟೈಮ್ ವೇಸ್ಟ್ ಅಂತಿದ್ದಾರೆ
ನಾನು ಮಾತ್ರ ನಾಟಕ ಮಾಡುವುದು ಹೇಗೆ ಎಂಬುದಕ್ಕಿಂತ ಹೆಚ್ಚು, "ಪ್ರಚಾರ" ಮಾಡುವುದು ಹೇಗೆ ಅಂತ ಪ್ಲಾನ್ ಮಾಡ್ತಿದ್ದೇನೆ!
ಅಂದ ಹಾಗೆ ನೀವೆಲ್ಲ ಬರದಿದ್ದರೆ ನಾವು ಏನು ಮಾಡಿದೆವು ಅಂತ ಯಾರಿಗೂ ಗೊತ್ತಾಗದು!!
ಬರುವ ಭಾನುವಾರ ಸಂಜೆ ಆರೂವರೆಗೆ ಸಂಘದ ಸಭಾಂಗಣ - ಸಿಕ್ಕಿದರೆ ನೋಡುವ. 

No comments:

Post a Comment