Thursday, January 27, 2011

ಯಶಸ್ವೀ ಕಲಾಪ್ರದರ್ಶನ

ಸುಧೀರ್ ಫಡ್ನೀಸ್ ಅವರ ಕಲಾಕೃತಿಗಳು

ಕಲಾವಿದರಾದ ಸುಧೀರ್ ಫಡ್ನೀಸ್, ರಮೇಶ್ ಪಚ್‍ಪಾಂಡೇ, ಎಫ್.ವಿ.ಚಿಕಮಠ್, ದೇವೇಂದ್ರ ಎಂ. ಬಡಿಗೇರ್, ದಯಾನಂದ ಕಮಾಕರ್, ಬಿ.ಪಿ.ಕಾರ್ತಿಕ್ ಅವರ ಕಲಾಕೃತಿಗಳ ಪ್ರದರ್ಶನವು ದೆಹಲಿಯ ಐಫಾಕ್ಸ್ ನಲ್ಲಿ ಜನವರಿ 18ರಿಂದಿಂದ 24 ರ ವರೆಗೆ ನಡೆಯಿತು. 
ಇಂಡಿಯ ಆರ್ಟ್ ಸಮ್ಮಿಟ್ ನ ಸಮಾನಾಂತರವಾಗಿ ನಡೆದ ಈ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿದೆ ಎಂದು ಕಲಾವಿದ ಸುಧೀರ್ ಫಡ್ನೀಸ್ ಅವರು ತಿಳಿಸಿದರು. ಕಲಾವಿದರು ತಮ್ಮ ನೂತನ ಕಲಾಕೃತಿಗಳನ್ನು ಪ್ರದರ್ಶನಗೊಳಿಸಿದರು. 
ಬಿ.ಪಿ. ಕಾರ್ತಿಕ್ ಅವರ ಕೃತಿಗಳಲ್ಲಿ ಅಸಂಗತೆಗಳ ಜತೆಗೆ ಪ್ರಕೃತಿಯ ವಿಲಕ್ಷಣತೆಯನ್ನು ಕಾಣಬಹುದಿತ್ತು. ಬೆಂಗಳೂರಿನಲ್ಲೆ ನೆಲೆಸಿರುವ ಈ ಕಲಾವಿದ ಬಣ್ಣಗಳಿಂದ ಕ್ಯಾನ್‍ವಾಸ್ ಮೇಲೆ ಕಾವ್ಯವನ್ನು ಸೃಷ್ಟಿಸುತ್ತಾರೆ. ಹಳೆಯ ಚೌಕಟ್ಟುಗಳಿಗೆ ಹೊಸದಾದ ತಾಜತನದಿಂದ ಕೂಡಿದ ಬಗೆಯನ್ನು ಬರೆಯುವ ಇವರ ಕಲಾಕೃತಿಗಳು ನಮ್ಮನ್ನು ಸುಂದರ ಲೋಕವೊಂದಕ್ಕೆ ಕೊಂಡೊಯ್ಯುತ್ತವೆ.
ಬಿಜಾಪುರ ಮೂಲದ ದೇವೇಂದ್ರ ಬಡೀಗೇರ್ ಅವರ ಕಲಾಕೃತಿಗಳು ನೈಜ ಬದುಕಿನ ವಿಶಿಷ್ಟತೆಗಳನ್ನು ತೋರುತ್ತಿತ್ತು. ರಮೇಶ್ ಪಚ್‍ಪಾಂಡೇ ಅವರು ಪೇಪರ್ ಮತ್ತು ಇದ್ದಿಲ ಮೂಲಕ ರಚಿಸಿದ ಕಲಾಕೃತಿಗಳನ್ನು ಪ್ರದರ್ಶಿಸಿದರು.
ಸುಧೀರ್ ಫಡ್ನೀಸ್ ಅವರ ಕಲಾಕೃತಿಗಳು ಬದುಕಿನ ವಿವಿಧ ಸ್ತರಗಳ ಆಳವನ್ನು ಪ್ರತಿಬಿಂಬಿಸುತ್ತಿದ್ದವು. ಸಮಗ್ರ ವಿಶ್ವವನ್ನೇ ತಮ್ಮೊಳಗಿಸಿಕೊಂಡಿರುವ ಇವರು ತಮ್ಮ ಭಾವನೆಗಳನ್ನು ಕುಂಚದ ಮೂಲಕ ಕ್ಯಾನ್‍ವಾಸ್‍ನಲ್ಲಿ ಹಿಡಿದು ತೋರಿಸುತ್ತಾರೆ.ಸಡಗರ, ಸಂವೇದನೆ ಮತ್ತು ಆಧುನಿಕ ಬದುಕಿನ ಉತ್ಸುಕತೆಗಳು ಇವರ ಕೃತಿಗಳಲ್ಲಿ ಕಾಣಬಹುದು.


ಎಫ್. ವಿ. ಚಿಕಮಠ್ ಅವರ ಕಲಾಕೃತಿಗಳು

ಬಿ.ಪಿ. ಕಾರ್ತಿಕ್ ಅವರ ಕಲಾಕೃತಿಗಳು



ಸುಧೀರ್ ಫಡ್ನೀಸ್ ಅವರ ಕಲಾಕೃತಿಗಳು
ದೇವೇಂದ್ರ ಬಡಿಗೇರ್ ಅವರ ಕಲಾಕೃತಿಗಳು

 

No comments:

Post a Comment