ಕೆಂಪುಕೋಟೆ ವಿಶೇಷ ವರದಿ
ದಿಲ್ಲಿ ನಗರ (ಕನ್ನಡ) ಕಲಾವಿದರ ರಂಗ (ದಿನಕರ) ತಂಡದ ಮಹತ್ವಾಕಾಂಕ್ಷೆಯ ಪ್ರಯೋಗ ನಾ ಸತ್ತಿಲ್ಲ ನಾಟಕವನ್ನು ಹಂಪಿ ಉತ್ಸವದಲ್ಲಿ ಪ್ರದರ್ಶಿಸಲು ತಂಡವು ದೆಹಲಿಯಿಂದ ಹಂಪಿಗೆ ಪ್ರಯಾಣ ಬೆಳೆಸಿದೆ.
ನಾ ಸತ್ತಿಲ್ಲ ನಾಟಕದ ದೃಶ್ಯ |
ಬರಹಗಾರ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಅವರ ಕೃತಿ ನಾ ಸತ್ತಿಲ್ಲ ನಾಟಕವನ್ನು ಶಿವಾನಂದ ಇಂಗಳೇಶ್ವರ ಅವರು ನಿರ್ದೇಶಿಸಿದ್ದಾರೆ.
ರಂಗದಲ್ಲಿ ಟಿ.ಎಸ್. ರಮೇಶ್, ಶ್ಯಾಮ ಸುಂದರ್, ಶ್ರೀನಿವಾಸ ಮೂರ್ತಿ ಡಿ.ಎ., ಹೆಚ್.ಕೆ.ರವಿಕುಮಾರ್, ಎಸ್.ಕುಮಾರ್, ಮಲ್ಲಣ ಗೌಡ, ಶಿವಾನಂದ ಇಂಗಳೇಶ್ವರ ಅಲ್ಲದೇ ಹಿನ್ನಲೆಯಲ್ಲಿ ಆಶಾ ಶ್ಯಾಮ ಸುಂದರ್, ಎಸ್.ಎಸ್. ಗೋವಿಂದರಾಜ್, ಶಶಿಕಾಂತ ಪಾಟೀಲ್ ಮೊದಲಾದವರಿದ್ದಾರೆ.
ನಾ ಸತ್ತಿಲ್ಲ ನಾಟಕದ ದೃಶ್ಯ |
ದಿನಕರ ತಂಡವು ಈ ಮೊದಲು ಕುಂ. ವೀರಭದ್ರಪ್ಪನವರಿಗೆ ಕೇಂದ್ರ ಅಕಾಡೆಮಿ ಪ್ರಶಸ್ತಿ ದೊರೆತ ಸಂದರ್ಭದಲ್ಲಿ ಅವರನ್ನು ದೆಹಲಿಯಲ್ಲಿ ಗೌರವಿಸಿದ ಸಂದರ್ಭ ಕುಂವೀ ಅವರ ಪಯಣ ಕಥೆಯ ನಾಟಕ ರೂಪಾಂತರ ನಾರಾಯಣ ಸ್ವಾಮಿ ಅವರ ನಿರ್ದೇಶನದಲ್ಲಿ ಪ್ರಸ್ತುತ ಪಡಿಸಿತ್ತು.
ಧನಬಲ, ತೋಳ್ಬಲ, ಕುತಂತ್ರಗಳ ಮೂಲಕ ಸತ್ಯ, ಅಹಿಂಸೆ, ತತ್ವಾದರ್ಶಗಳನ್ನೆಲ್ಲಾ ಕೊಲ್ಲುವ ಪ್ರಯತ್ನವನ್ನು ನಾಟಕವು ಬಿಂಬಿಸುತ್ತದೆ.
ಜನವರಿ 28 ರಂದು ಹಂಪಿಯಲ್ಲಿ, 29 ರಂದು ಬಿಜಾಪುರದಲ್ಲಿ ಮತ್ತು 30ರಂದು ಇಡಕಲ್‍ನಲ್ಲಿ ನಾಟಕದ ಪ್ರದರ್ಶನವು ನಡೆಯಲಿದೆ.
ಕೆಂಪುಕೋಟೆ
ದಿನಕರ ನಾಟಕ ತಂಡದ ನಾ ಸತ್ತಿಲ್ಲ ನಾಟಕ ಹಂಪಿ ಉತ್ಸವದಲ್ಲಿ ಪ್ರದರ್ಶನ ನೀಡುತ್ತಿರುವುದು ಸಂತೋಷದ ವಿಷಯ ದಿನಕರ ತಂಡವು ಇದೇ ರೀತಿ ದೇಶದಾದ್ಯಂತ ಇನ್ನೂ ಹೆಚ್ಚಿನ ಪ್ರದರ್ಶನಗಳನ್ನು ನೀಡಲಿ ಎಂಬುದು ನಮ್ಮ ಆಸೆ.
ReplyDelete-ವೀರೇಶ ಹೊಗೆಸೊಪ್ಪಿನವರ