Tuesday, January 18, 2011

ಕುತೂಹಲದ ಮುನ್ನುಡಿ

ಹೊಸ ಕ್ರಿಸ್ತ ವರ್ಷ 2011 ಆರಂಭಗೊಂಡು ಹದಿನಾಲ್ಕರಲ್ಲಿ ಮಕರ ಸಂಕ್ರಮಣ ಬಂತು.
ಕಳೆದ ವರ್ಷ ಕೆಂಪು ಕೋಟೆ ಎಂಬ ವೆಬ್‍ಸೈಟ್ ಮಾಡಲು ಹೋಗಿ ಅರ್ಧದಲ್ಲಿ ಬಿಟ್ಟ ಪಾಪಪ್ರಜ್ಣೆ!
ಈ ಹೊಸ ವರ್ಷ ಕುಟ್ಟಲು ತೊಡಗಿದ್ದೇ, ಕಟ್ಟಲು ಆರಂಭಿದ್ದೇ.
ಬ್ಲಾಗ್‍ಸ್ಪಾಟ್‍ನಲ್ಲೆ ನನ್ನ ವೈಯಕ್ತಿಕ ಬ್ಲಾಗ್ ಬಾನಾಡಿ ಕೂಡ ನನ್ನ ಕೆಲವು ಬರಹಗಳನ್ನು ಪ್ರಕಟಿಸಿದೆ.
ದೆಹಲಿಯ ಕನ್ನಡಿಗರ ನಿರಂತರ ಸಂವಹನಕ್ಕಾಗಿ ಈ ಬ್ಲಾಗ್ ಕೆಂಪುಕೋಟೆ ಉಪಯೋಗವಾಗಬಹುದು ಎಂಬ ಭರವಸೆ.
ಕಳೆದ ನಾಲ್ಕು ದಿನಗಳಿಂದ ಅಕ್ಷರಗಳನ್ನು ಕುಟ್ಟುತ್ತಾ ಕೆಂಪು ಕೋಟೆ ಕಟ್ಟಲು ಹೋದೆ.
ಯಾರಿಗೂ ಹೇಳಿಲ್ಲ. ನಮ್ಮ ಯಹೂ ಗ್ರೂಪ್‍ನಲ್ಲಿ ಸುಮಾರು ದೆಹಲಿ ಕನ್ನಡಿಗರಿದ್ದಾರೆ.
ಅವರ ಕುತೂಹಲ ಹೇಗಿದೆ ಎಂಬುದನ್ನು ಪರೀಕ್ಷಿಸಲು ಸೋಮವಾರ ಒಂದು ಮೈಲ್ ಕಳುಹಿಸಿದೆ!
ದೆಹಲಿ ಕರ್ನಾಟಕ ಸಂಘದ ಚುನಾವಣೆ ನಂತರದ ಈ ಮೈಲ್ ಕೆಲವರಲ್ಲಿ ಕುತೂಹಲ ಮೂಡಿಸಿತು.
ದೆಹಲಿಯ ಕನ್ನಡ ಸ್ನೇಹಿತರೇ...
ಹೊರಗಿದ್ದವರಿಗೆ ಒಳ ಹೋಗಲು ತವಕ! 
ಒಳಗಿದ್ದವರಿಗೆ ಹೊರ ಬರುವ ತಲ್ಲಣ!
ಕುತೂಹಲವೇ?
ನಿರೀಕ್ಷಿಸಿ ...  ಸದ್ಯದಲ್ಲಿಯೇ  ತಿಳಿಯುವುದು! 
ನಾನು ಕುಟ್ಟುವುದು ಯಾವುದನ್ನು ಎಂದು ಅಥವಾ ಕಟ್ಟುವುದು ಏನೆಂದು!!

ಬಂದ ಪ್ರತಿಕ್ರಿಯೆಗಳು

ಎಂತದ್ದು ಮಾರಾಯ್ರೆ?
ಬಿಳಿಮಲೆ

ಬಾಲಣ್ಣ ಇದೇನಣ್ಣ ಗಲಿಬಿಲಿ.. 
ಅದೇನ್ ಕುಟ್ಟುತೀರೋ.. ಏನ್ ಕಟ್ಟುತೀರೋ.. ಗೊತ್ತಾಗ್ತಾನೇ ಇಲ್ಲ.
Veeresha H

ಪೀಠಿಕೆ ಚೆನ್ನಾಗಿದೆ ಸರ್ !!
ರಮೇಶ್ ಟಿ. ಎಸ್.

Nija Balakrishna avare,
ಹೊರಗಿದ್ದವರಿಗೆ ಒಳ ಹೋಗಲು ತವಕ! 
ಒಳಗಿದ್ದವರಿಗೆ ಹೊರ ಬರುವ ಆತಂಕ!
ಇದುವೇ ಜೀವನದ ನೀರಸತೆಯನ್ನು ಅಳಿಸುವ ನಿತ್ಯ ಚೇತನ
ಚಿಕ್ಕವನಾಗಿದ್ದಾಗ ಬೇಗ ದೊಡ್ಡವನಾಗಬೇಕೆಂಬ ಹಂಬಲ
ದೊಡ್ಡವನಾದಾಗ ಚಿಕ್ಕವನಾಗಿದ್ದರೆ ಚೆನ್ನಾಗಿತ್ತೇನೋ ಎಂಬ ಮರುಕ
ಇದುವೇ ನಿರಂತರ, ಇದುವೇ ಜೀವನದ ಸತ್ಯ
Awaiting for somthing new from you,
CHENNU S MATHAD

ಕವಿತೆ ಬಿಟ್ಟು ಸಸ್ಪೆನ್ಸ್ ಥ್ರಿಲ್ಲರ್ ಬರೆಯಲು ತೊಡಗಿದ ಹಾಗಿದೆ.
ಗುರು ಬಾಳಿಗೆ

I know, this is your kempu kote portal!
All the best!!
ಶಶಿಧರ್ ಭಟ್


ನೀವು ಮೂಡಿಸಿದ ಸಸ್ಪೆನ್ಸೂ ಚೆನ್ನಾಗಿತ್ತು, ಕೆಂಪು ಕೋಟೆಯೂ ಚೆನ್ನಾಗಿದೆ.
ಜಯಾ ಭಟ್


ಫೋನ್ ನಲ್ಲಿ:
ಪ್ರಕಾಶ್ ಶೆಟ್ಟಿ ಉಳೆಪಾಡಿ ಸಸ್ಪೆನ್ಸ್ ಬಿಡಿಸಿ ಎನ್ನುವ ಒತ್ತಾಯ
ರೇಣುಕಾ ನಿಡಗುಂದಿ ಯವರು ಅದೇನು ನೀವು ಬಾಂಬ್ ಹಾಕ್ತಿರೋ?
ಕೆ.ಎಸ್.ಜಿ ಶೆಟ್ಟಿ ’ಈ ದಾದ ಬರೆತ ಮಾರಾಯ ಗ್ರೂಪ್‍ಡ್, ಮಾತೆರೆಗ್ಲ ಪೋಡಿಗೆ ಕುಲ್ದ್ಂಡ್’
(ನೀನೇನು ಬರೆದಿದ್ದಿ ಮಾರಾಯ ಎಲ್ಲರಿಗೂ ಭಯವಾಗಿದೆ)

ನೆನೆಯುತ್ತಿದ್ದೇನೆ:
ಡಾ.ಪುರುಷೋತ್ತಮ ಬಿಳಿಮಲೆ, ಬಸ್ತಿ ದಿನೇಶ್ ಶೆಣೈ, ಟಿ.ಶಿವಪ್ರಸಾದ್ ಶೆಟ್ಟಿ, ಗುರು ಬಾಳಿಗ, ಶಶಿಧರ್ ಭಟ್ ಮತ್ತು ಹತ್ತಿರದ ಸ್ನೇಹಿತರು.

3 comments:

  1. ನಮಸ್ಕರ ಕಣಣ್ಣೋ..

    ಬಾಳ ಚೊಲೋ ಮಾಡಿದ್ರಿ ಬುಡ್ರಿ..

    ನೀವು ನಿಮಗನಿಸಿದ ಯಾವುದೇ ವಿಷಯಗಳನ್ನು ಇದರಲ್ಲಿ ಪ್ರಕಟಿಸಲು ದಯವಿಟ್ಟು ನನಗೆ ಕಳುಹಿಸಿರಿ.. ಅಂತ ಹಾಕಿದ್ದೀರಿ ಅಣ್ಣಾ..

    ಇದರ ಬಹಲು ನಾವೆ ಈ ಬ್ಲಾಗಲ್ಲಿ ಬರೆದು ಅದನ್ನು ನೀವು ನೋಡಿ ಪ್ರಕಟಿಸುವ ಹಾಗೆ ಮಾಡಬಹುದಲ್ವಾ?

    ReplyDelete
  2. ಬಾಲಣ್ಣ,
    ಸೂಪರ್ರು... ಕೆಂಪುಕೋಟೆ ಬ್ಲಾಗು ಶುರು ಆಗಿದ್ದು ಒಳ್ಳೆಯದಾಯ್ತು.

    ಸಸ್ಪೆನ್ಸ್ ಇಟ್ಟುಕೊಂಡೇ ಶುರು ಆದ ಈ ಬ್ಲಾಗ್ ಇನ್ನಷ್ಟು ಕುತೂಹಲ ಕೆರಳಿಸುವ ವಿಷಯಗಳನ್ನು ಹೊತ್ತು ತರಲಿ.

    ದೆಹಲಿ ಕನ್ನಡಿಗರ ಅಂತರಜಾಲ ಮುಖವಾಣಿ ಇದಾಗಲಿ ಎಂದು ನನ್ನ ಹಾರೈಕೆ ನಮ್ಮದು..

    ReplyDelete
  3. ಕೊರೆಯುವ ಚಳಿಯ ನಡುವೆ, ದೆಹಲಿ ಕರ್ನಾಟಕ ಸಂಘದ ಚುನಾವಣೆಯ ಬಿಸಿ ತಣ್ಣಗಾಗುವ ಮುನ್ನ. . . . . ಕೆಂಪು ಕೋಟೆಗೆ ಕನ್ನಡದ ಬಾಂಬ್ ಹಾಕಿದ್ದೀರಿ. . . . . . ಶುಭವಾಗಲಿ. . . . .

    ವಸಂತ ಶೆಟ್ಟಿ ಬೆಳ್ಳಾರೆ
    ದೆಹಲಿ ಮಿತ್ರ

    ReplyDelete