Saturday, February 5, 2011

ಪ್ರತಿಭೆಯ ಕಾರಂಜಿ - ಜನಕಪುರಿಯ ಮಹಿಳೆಯರು


ಪ್ರತಿಭಾವಂತ ಮಹಿಳೆಯರು ಮತ್ತು ಮಕ್ಕಳು

ದೆಹಲಿಯ ಜನಕಪುರಿ ಬಡಾವಣೆ ಒಂದು ಕಾಲದಲ್ಲಿ ಕನ್ನಡಿಗರು ನೆಲೆಸುವ ತಾಣವಾಗಿತ್ತು. ಇಂದು ಕನ್ನಡಿಗರು ದೆಹಲಿಯ ವಿವಿಧ ಬಡಾವಣೆಗಳಲ್ಲಿ ಚೆಲ್ಲಿ ಹೋಗಿದ್ದಾರೆ. ಆದರೆ ಈಗಲೂ ಜನಕಪುರಿಯಲ್ಲಿ ಸಾಕಷ್ಟು ಸಂಖ್ಯೆಯ ಕನ್ನಡಿಗರಿದ್ದಾರೆ. ಜನಕಪುರಿ ಕನ್ನಡ ಕೂಟ ದೆಹಲಿಯ ಕನ್ನಡ ಸಂಸ್ಥೆಗಳಲ್ಲಿ ಅತ್ಯಂತ ಕ್ರಿಯಾಶೀಲ ಸಂಸ್ಥೆಯಾಗಿದೆ. ಪ್ರತಿವರ್ಷ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಈ ಕೂಟದ ವಾರ್ಷಿಕೋತ್ಸವ ಕಳೆದ ಭಾನುವಾರ ನಡೆಯಿತು. ಕೂಟದ ಹೊಸ ಕಾರ್ಯದರ್ಶಿಯಾಗಿ ಆಯ್ಕೆ ಗೊಂಡ ಎಂ.ವಿ. ವೆಂಕಟೇಶ್ ಅವರು ಕೂಟದ ಮಹಿಳಾ ಮತ್ತು ಮಕ್ಕಳ ದಿನಾಚರಣೆಯ ಕಾರ್ಯಕ್ರಮದ ಒಂದು ನೋಟವನ್ನು ಕೆಂಪುಕೋಟೆ ಓದುಗರಿಗೆ ನೀಡಿದ್ದಾರೆ. ಜನಕಪುರಿಯ ಕನ್ನಡಿಗರಲ್ಲಿರುವ ಪ್ರತಿಭೆಯ ಭಂಡಾರ, ಮಾಡಬೇಕೆನ್ನುವ ಛಲ, ಸ್ಪೂರ್ತಿದಾಯಕ ಹಾಗೂ ರಚನಾತ್ಮಕ ಕಾರ್ಯಗಳನ್ನು ವೀಕ್ಷಿಸಿದಾಗ ನಿಜವಾಗಲೂ ಸ್ತ್ರೀಶಕ್ತಿಯ ಅದ್ಭುತವನ್ನು ಕಾಣಬಹುದು ಎನ್ನುತ್ತಾರೆ ಅವರು.

ಜನಕಪುರಿಯ ಮಹಿಳಾ ಮಂಡಳಿಯ ಕಾರ್ಯದರ್ಶಿ ಸವಿತಾ ಇನಾಂದಾರ್ ಅವರು ತನ್ನದೇ ವಿಭಿನ್ನ ರೀತಿಯ ಶೈಲಿ, ಕಾರ್ಯಕ್ರಮ ಪ್ರಸ್ತುತಪಡಿಸುವವರನ್ನು ಪರಿಚಯಿಸಿದ ರೀತಿ, ನಡುನಡುವೆ ನೆರೆದ ಸಭಿಕರಿಗೆ ಸಾಮಾನ್ಯ ಜ್ಞಾನ ರಸಪ್ರಶ್ನೆಗಳನ್ನು ಕೇಳುವುದು, ಸರಿಯಾದ ಉತ್ತರ ನೀಡಿದವರಿಗೆ ಕಿರುಕಾಣಿಕೆಗಳನ್ನು ನೀಡುವುದು - ಇವೆಲ್ಲಾ ಜನರನ್ನು ತಮ್ಮ ತಮ್ಮ ಕುರ್ಚಿಗಳಿಗೆ ಕಟ್ಟಿಹಾಕಿತ್ತು.
ಜನಕಪುರಿಯ ಮಹಿಳಾ ಶಕ್ತಿ
ದೈನಂದಿನ ಕಾರ್ಯಗಳ ಮಧ್ಯೆಯೂ ಸಮಯಗೂಡಿಸಿ ಹಾಡು, ನೃತ್ಯದ ಅಭ್ಯಾಸ ಮಾಡಿ ಪ್ರದರ್ಶಿಸಿದಾಗ ಪ್ರೇಕ್ಷಕರೆಲ್ಲಾ ಮಂತ್ರಮುಗ್ದರಾಗಿದ್ದರು. ಶೀಲಾ ಕಿ ಜವಾನಿ, ಮುನ್ನಾ ಕಿ ಬದ್ನಾಮಿ ಶಬ್ದಗಳನ್ನು ಉಪಯೋಗಿಸದೇ ಮೈತುಂಬಾ ಉಡುಪು ಧರಿಸಿಕೊಂಡರು ಸಹಾ ಜನಗಳಿಗೆ ಕಚಗುಳಿಯಿಡುವಂತಹ ರಸಭರಿತ ಹಾಡು, ನೃತ್ಯಮಾಡಿದಾಗ ಜನರ ಕರತಾಡನ ಮತ್ತು ಶಿಲ್ಲೆ ತಾರಕಕ್ಕೇರಿದಲ್ಲದೇ ಜನ ತಾವು ಇದ್ದಲೇ ಡ್ಯಾನ್ಸ್ ಮಾಡಲು ಹೊರಟಾಗ ಮಹಿಳೆಯರ ಶ್ರಮ ಸಾರ್ಥಕವೆನಿಸಿತು.
ಈ ಕಾರ್ಯಕ್ರಮ ಕೇವಲ ಪ್ರತಿಭೆಯ ಪ್ರದರ್ಶನವಾಗಿರದೇ ಮಹಿಳೆಯರು ತಮ್ಮ ಮಕ್ಕಳಿಗೆ ನೀಡಿದ ಉತ್ತಮ ಸಂಸ್ಕಾರದ ಪ್ರದರ್ಶನವೂ ಆಗಿತ್ತು. ಮೂರು ವರ್ಷದ ಪುಟ್ಟ ಮಗುವೊಂದು ಸುಂದರಕಾಂಡ ಹೇಳಿದಾಗ ಜನ ಬೆರಗಾದರು. ಇನ್ನೊಬ್ಬ ಬಾಲಕಿ ಭಗವದ್ಗೀತೆಯ ಐದನೆಯ ಅಧ್ಯಾಯವನ್ನು ಉವಾಚಿಸಿದಾಗ ಜನರ ಬಿಟ್ಟ ಬಾಯಿ ಬಿಟ್ಟಂತೆಯೇ ಇತ್ತು. ಮಕ್ಕಳಿಗೆ ಇಷ್ಟವಾದುದನ್ನು ಮಾಡಲು ಮುಕ್ತವಾಗಿ ಬಿಟ್ಟರೆ ಅವರೇನು ಬೇಕಾದರೂ ಮಾಡಬಲ್ಲರು ಹುಡುಗಿಯೊಬ್ಬಳು ಸ್ವರಚಿತ ಕವನ ಓದಿದಾಗ ತಿಳಿಯಿತು. ಹೆಮ್ಮಕ್ಕಳು ಉತ್ಸಾಹದ ಚಿಲುಮೆಯಂತೆ ನರ್ತಿಸಿದಾಗ ಅವರ ಕಲಾ ಪ್ರತಿಭೆಯನ್ನು ಕಂಡ ಪ್ರೇಕ್ಷಕರು ಅದನ್ನು ಪ್ರಶಂಸಿಸುತ್ತಿದ್ದರು.
ಇವೆಲ್ಲಾ ಅಂದಿನ ಕಾರ್ಯಕ್ರಮವಾದರೆ, ಮಹಿಳಾ ಮಂಡಳಿಯ ನಿಜವಾದ ಶಕ್ತಿ ಅವರು ನಾಟಕ ಸ್ಪರ್ಧೆಗಳಲ್ಲಿ  ಪಡೆದ ಬಹುಮಾನ, ಪಂಚತಾರಾ ಹೋಟೆಲ್‍ನಲ್ಲಿ ನಡೆಸಿದ ಅಡುಗೆಸ್ಪರ್ಧೆಯಲ್ಲಿ ಗೆದ್ದ ಬಹುಮಾನಗಳಿಂದ ಅವರು ಎಂಥವರಿಗೂ ಸ್ಪರ್ಧೆ ನೀಡುವ ಶಕ್ತಿ ಇರುವವರು ಎಂದು ವಿಸ್ಮಯಪಡಬೇಕಾಗುತ್ತದೆ.
ಕೆಂಪುಕೋಟೆ

2 comments:

  1. This was one of the best organised and very interesting and well staged function I have come across in the recent past. The article by Sri MV Venkatesh is apt. Almost all the items staged such as songs, dances, children programmes, compering the programme, the dress-up-everything were of high in quality and the audience were spell bound. MV Venkatesh has rightly pointed out that children will learn what we inculcate in them. The Gita recittion, Sundarakanda recitation, the dance 'Pogadiralo Ranga', dances by kum Rai, chi.Vishnu, Kum Inamdar, Manish and others gave colors to the function. The songs rendered by Ladies thrilled the audience. Kudos to Janakpuri Mahila koota for their latent talents. Hats off to Smt.Savitha Inamdar for excellent compering and designing the programmes rich in tradition and culture.
    Delhi Karnataka Sangha deserves applaud for providing them the auditorium which boosted their interest and enthusiasm.

    KM Kalumangi.

    ReplyDelete
  2. Dhanyvadagalu!!
    Navu unabadisida rasadautana nimagella priyavadudannu keli manasige harushavayitu. Innastu olleya karyakramavannu kodalu kalavidanige onde ondu uttejisuva matu saku.

    Savita Inamdar.

    ReplyDelete